Wednesday, 28 October 2026 — Kannadavahini
BREAKING NEWS
ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ
ದೇಶ

ಜನಸಂಖ್ಯೆ ವೃದ್ದಿಯಲ್ಲಿ ಇಸ್ಲಾಂ ನಂ.1: ಹಿಂದೂ ಧರ್ಮಕ್ಕೆ 4ನೇ ಸ್ಥಾನ: ಸಮೀಕ್ಷೆ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 2 ವೀಕ್ಷಣೆಗಳು
islam population

ಇಸ್ಲಾಂ ಧರ್ಮ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಆಗಿದ್ದು, ಕ್ರಿಶ್ಚಿಯನ್ ಧರ್ಮ 2ನೇ ಸ್ಥಾನ ಗಳಿಸಿದೆ. ಅಚ್ಚರಿ ವಿಷಯ ಅಂದರೆ ಹಿಂದೂಗಳ ಜನಸಂಖ್ಯೆ ಶೇಕಡವಾರು ಲೆಕ್ಕದಲ್ಲಿ ಕುಸಿತ ಕಂಡಿದೆ.

ಪ್ಯೂ ರಿಸರ್ಚ್ ಸಂಸ್ಥೆ ನಡೆಸಿದ ಸಮೀಕ್ಷೆ ವರದಿ ಪ್ರಕಾರ 2010ರಿಂದ 2020ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ 347 ದಶಲಕ್ಷ ಏರಿಕೆಯಾಗಿದೆ. ಈ ಮೂಲಕ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದೆ.

ಕ್ರಿಶ್ಚಿಯನ್ ಧರ್ಮ 2ನೇ ಸ್ಥಾನ ಪಡೆದಿದ್ದರೆ, ಯಾವುದೇ ಧರ್ಮದಲ್ಲಿ ಗುರುತಿಸಿಕೊಳ್ಳದ ಜನರ ಸಂಖ್ಯೆ 2ನೇ ಸ್ಥಾನ ಗಳಿಸಿದೆ. ಹಿಂದೂ ಧರ್ಮಕ್ಕೆ 4ನೇ ಸ್ಥಾನ ಲಭಿಸಿದೆ.

ಕ್ರಿಶ್ಚಿಯನ್, ಇಸ್ಲಾಂ, ಹಿಂದೂ, ಬೌದ್ಧ, ಯಹೂದಿ ಸೇರಿದಂತೆ 9 ಪ್ರಮುಖ ಧರ್ಮಗಳ ಕುರಿತು ಅಧ್ಯಯನ ನಡೆಸಲಾಗಿದೆ. ಎಲ್ಲಾ ಧರ್ಮಗಳಿಗೆ ಹೋಲಿಸಿದರೆ ಇಸ್ಲಾಂ ಧರ್ಮದ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ.

ಮುಸ್ಲಿಮರ ಜನಸಂಖ್ಯೆ 10 ವರ್ಷದಲ್ಲಿ ಶೇ.1.8ರಷ್ಟು ಏರಿಕೆಯಾಗಿದೆ. ಜಗತ್ತಿನ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.25.6ರಷ್ಟು ಪಾಲು ಹೊಂದಿದ್ದಾರೆ.

ಕ್ರಿಶ್ಚಿಯನ್ನರ್ ಜನಸಂಖ್ಯೆ 122 ದಶಲಕ್ಷ ಏರಿಕೆಯಾಗಿದ್ದು, ಒಟ್ಟಾರೆ ಜನಸಂಖ್ಯೆ 230 ಕೋಟಿಗೆ ಏರಿಕೆಯಾಗಿದೆ. 1.8ರಷ್ಟು ಜನಸಂಖ್ಯೆ ಏರಿಕೆ ಮೂಲಕ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.28.8 ರಷ್ಟು ಪಾಲು ಹೊಂದಿದ್ದು, ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಧರ್ಮವಾಗಿ ಕ್ರಿಶ್ಚಿಯನ್ ಉಳಿದುಕೊಂಡಿದೆ. ಆದರೆ ಜನಸಂಖ್ಯೆ ಏರಿಕೆಯಲ್ಲಿ ಇಳಿಮುಖ ಕಂಡಿದೆ.

ಯಾವುದೇ ಧರ್ಮದಲ್ಲಿ ಗುರುತಿಸಿಕೊಳ್ಳದ ಜನರ ಸಂಖ್ಯೆ 270 ದಶಲಕ್ಷದಿಂಧ 1.9 ಶತಕೋಟಿಗೆ ಏರಿದೆ. ವಿಶ್ವ ಜನಸಂಖ್ಯೆಯಲ್ಲಿ ಇವರ ಪಾಲು ಸುಮಾರು ಶೇಕಡಾ 24.2 ಕ್ಕೆ ಏರಿದೆ.

ಹಿಂದೂಗಳು ವಿಶ್ವದ ಒಟ್ಟಾರೆ ಜನಸಂಖ್ಯೆಯಷ್ಟೇ ವೇಗವಾಗಿ ಬೆಳೆಯುತ್ತಿರುವ ನಾಲ್ಕನೇ ಸ್ಥಾನದಲ್ಲಿದೆ. ಹಿಂದೂಗಳ ಸಂಖ್ಯೆ 126 ದಶಲಕ್ಷದಿಂದ 1.2 ಶತಕೋಟಿಗೆ ಏರಿಕೆಯಾಗಿದೆ. ಹಿಂದೂಗಳು ಶೇಕಡಾ 14.9 ರಷ್ಟಿದ್ದಾರೆ 2010ಕ್ಕೆ ಹೋಲಿಸಿದರೆ (ಶೇಕಡಾ 15) ಅಲ್ಪ ಕುಸಿತ ಕಂಡಿದೆ.

10 ವರ್ಷಗಳಲ್ಲಿ ಯಹೂದಿ ಜನಸಂಖ್ಯೆಯು ಸುಮಾರು ಆರು ಪ್ರತಿಶತದಷ್ಟು ಹೆಚ್ಚಾಗಿದೆ – 14 ಮಿಲಿಯನ್‌ನಿಂದ 15 ಮಿಲಿಯನ್ ಜನರಿಗೆ ಎಂದು ವರದಿ ಹೇಳಿದೆ. 2020 ರ ಹೊತ್ತಿಗೆ, ಶೇಕಡಾ 45.9 ಯಹೂದಿಗಳು ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದರು – ಯಾವುದೇ ದೇಶದಲ್ಲಿ ಅತಿ ಹೆಚ್ಚು ಯಹೂದಿ ಜನಸಂಖ್ಯೆ. ಇದರ ನಂತರ ಉತ್ತರ ಅಮೆರಿಕಾದಲ್ಲಿ ಶೇ. 41.2 ರಷ್ಟಿದೆ.

2020ರಲ್ಲಿ ಒಂದು ದಶಕಕ್ಕೂ ಹಿಂದಿನದಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದ ಏಕೈಕ ಪ್ರಮುಖ ಧಾರ್ಮಿಕ ಗುಂಪು ಬೌದ್ಧರು. ಜಗತ್ತಿನಲ್ಲಿ ಬೌದ್ಧರ ಸಂಖ್ಯೆ ಶೇ. 0.8 ರಷ್ಟು ಕಡಿಮೆಯಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8391 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment