Thursday, May 14, 2026
Google search engine
Homeದೇಶಖ್ಯಾತ ಗಾಯಕಿ ಮಂಗ್ಲಿ ಬರ್ತಡೆ ಪಾರ್ಟಿಯಲ್ಲಿ ಗಾಂಜಾ ಪತ್ತೆ: ಎಫ್ ಐಆರ್ ದಾಖಲು

ಖ್ಯಾತ ಗಾಯಕಿ ಮಂಗ್ಲಿ ಬರ್ತಡೆ ಪಾರ್ಟಿಯಲ್ಲಿ ಗಾಂಜಾ ಪತ್ತೆ: ಎಫ್ ಐಆರ್ ದಾಖಲು

ಖ್ಯಾತ ಗಾಯಕಿ ಮಂಗ್ಲಿ ಬರ್ತಡೇ ಪಾರ್ಟಿ ವೇಳೆ ಪೊಲೀಸರು ದಾಳಿ ನಡೆಸಿ, ಮಾದಕ ವಸ್ತು, ವಿದೇಶೀ ಮದ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ತೆಲಂಗಾಣದ ಎರ್ಲಪಲ್ಲಿರುವ ತ್ರಿಪುರಾ ರೆಸಾರ್ಟ್‍ನಲ್ಲಿ ಸೋಮವಾರ ತಡರಾತ್ರಿ ನಡೆಯುತ್ತಿದ್ದ ಬರ್ತಡೇ ಪಾರ್ಟಿ ಮೇಲೆ ಚೆವೆಲ್ಲಾ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಗಾಂಜಾ, ವಿದೇಶಿ ಮದ್ಯ ಪತ್ತೆಯಾಗಿದ್ದು ಪಾರ್ಟಿಯಲ್ಲಿ ಮಾದಕವಸ್ತು ಸೇವಿಸಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೆಡಿಕಲ್ ಟೆಸ್ಟ್‌ನಲ್ಲಿ ಹಲವರು ಮಾದಕ ವಸ್ತು ಸೇವಿಸಿರೋದು ಪತ್ತೆಯಾಗಿದೆ. ಈ ಸಂಬಂಧ ಚೆವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿ ವೇಳೆ ಪೊಲೀಸರು ವಿಡಿಯೋ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಂಗ್ಲಿ, ವಿಡಿಯೋ ಮಾಡೋದು ನಿಲ್ಲಿಸ್ತಿಯೋ ಇಲ್ವೋ ಎಂದು ಪೊಲೀಸರ ಮೇಲೆ ಗದರಿದ್ದಾರೆ. ಇದಕ್ಕೆ, ನನ್ನ ಕೆಲಸ ನಾನು ಮಾಡ್ತಿದ್ದೇನೆ ಎಂದು ಪೊಲೀಸ್ ಸಿಬ್ಬಂದಿ ಉತ್ತರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments