Thursday, May 14, 2026
Google search engine
Homeತಾಜಾ ಸುದ್ದಿ6405 ಕೋಟಿ ವೆಚ್ಚದ ಕರ್ನಾಟಕ ಸೇರಿ 3 ರಾಜ್ಯಗಳ ದ್ವಿಮುಖ ಮಾರ್ಗ ರೈಲು ಮಾರ್ಗಕ್ಕೆ ಕೇಂದ್ರ...

6405 ಕೋಟಿ ವೆಚ್ಚದ ಕರ್ನಾಟಕ ಸೇರಿ 3 ರಾಜ್ಯಗಳ ದ್ವಿಮುಖ ಮಾರ್ಗ ರೈಲು ಮಾರ್ಗಕ್ಕೆ ಕೇಂದ್ರ ಸಂಪುಟ ಅಸ್ತು

ನವದೆಹಲಿ: ಕರ್ನಾಟಕದ ಬಳ್ಳಾರಿ-ಚಿಕ್ಕಜಾಜೂರು ಸೇರಿದಂತೆ ಮೂರು ರಾಜ್ಯಗಳ ದ್ವಿಮುಖ ರೈಲು ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 7 ಜಿಲ್ಲೆಗಳಲ್ಲಿ ಹಾದು ಹೋಗುವ ಮೂಲಕ ಜೋಡಿ ರೈಲು ಮಾರ್ಗಕ್ಕೆ ಅನುಮೋದನೆ ನೀಡಲಾಯಿತು.

ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಚಿಕ್ಕಜಾಬೂರು ನಡುವಿನ ರೈಲು ಮಾರ್ಗಕ್ಕೆ 3342 ಕೋಟಿ ರೂ. ಮೀಸಲಿಡಲಾಗಿದ್ದು, ಇದು 185 ಕಿ.ಮೀ ಉದ್ದದ ಈ ರೈಲು ಮಾರ್ಗ ಹೊಂದಿದ್ದು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮೂಲಕ ಹಾದುಹೋಗಲಿದೆ. ಈ ಮಾರ್ಗದಲ್ಲಿ 19 ಸ್ಟೇಷನ್‌ಗಳು, 29 ಪ್ರಮುಖ ಸೇತುವೆಗಳು, 250 ಚಿಕ್ಕ ಸೇತುವೆಗಳು, 21 ರಸ್ತೆ ಮೇಲ್ಸೇತುವೆ ಮತ್ತು 85 ಕಿ.ಮೀ ರೈಲು ಮಾರ್ಗ ಇದೆ.

ಈ ಯೋಜನೆಯಿಂದ ಕಲ್ಲಿದ್ದಲು, ಕಬ್ಬಿಣದ ಆಯಸ್ಕಾಂತ, ಕಬ್ಬಿಣದ ಒರೆ, ಕೋಕಿಂಗ್ ಕಲ್ಲಿದ್ದಲು, ಉಕ್ಕು, ಗೊಬ್ಬರ, ಆಹಾರ ಧಾನ್ಯಗಳು ಮತ್ತು ಇತರ ಉತ್ಪನ್ನಗಳ ಸಾಗಣೆಗೆ ಅನುಕೂಲವಾಗಲಿದೆ. ಇದು 470 ಗ್ರಾಮಗಳು ಮತ್ತು ಸುಮಾರು 15 ಲಕ್ಷ ಜನರಿಗೆ ಸುಧಾರಿತ ಸಂಪರ್ಕ ಕಲ್ಪಿಸಲಿದೆ.

ಯೋಜನೆಯಿಂದ ಪ್ರತೀ ವರ್ಷ 20 ಕೋಟಿ ಲೀಟರ್ ಡೀಸೆಲ್ ಉಳಿತಾಯವಾಗಲಿದ್ದು, 18.9 ದಶಲಕ್ಷ ಟನ್ ಕಾರ್ಬನ್ ಡೈಯಾಕ್ಲೈಡ್ ಉತ್ಪಾದನೆ ತಗ್ಗಿಸುತ್ತದೆ.

ಕೊಡೆರ್ಮಾ–ಬರ್ಕಕಾನಾ ದ್ವಿಮುಖ ಮಾರ್ಗ (133 ಕಿ.ಮೀ): ಈ ವಿಭಾಗವು ಜಾರ್ಖಂಡ್‌ನ ಕಲ್ಲಿದ್ದಲು-ಸಮೃದ್ಧ ಪ್ರದೇಶವನ್ನು ಹಾದುಹೋಗುತ್ತದೆ ಮತ್ತು ಪಾಟ್ನಾ ಮತ್ತು ರಾಂಚಿ ನಡುವಿನ ಅತ್ಯಂತ ಕಡಿಮೆ ಮತ್ತು ಅತ್ಯಂತ ಪರಿಣಾಮಕಾರಿ ರೈಲು ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತದೆ.

ಜಾರ್ಖಂಡ್‌ನ ಕೊಡೆರ್ಮಾ, ಛತ್ರ, ಹಜಾರಿಬಾಗ್ ಮತ್ತು ರಾಮಗಢ ಸೇರಿ ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. 1.5 ದಶಲಕ್ಷ ಜನಸಂಖ್ಯೆಗೆ ಸೇವೆ ಸಲ್ಲಿಸುವ 938 ಹಳ್ಳಿಗಳಿಗೆ ಸಂಪರ್ಕ ಸುಧಾರಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments