Sunday, May 31, 2026
Google search engine
Homeಅಪರಾಧಮದುವೆ ಆದ 3 ವಾರಕ್ಕೆ ಪತಿ ಕೊಲೆಗೈದ ಪತ್ನಿ!

ಮದುವೆ ಆದ 3 ವಾರಕ್ಕೆ ಪತಿ ಕೊಲೆಗೈದ ಪತ್ನಿ!

ದೇಶಾದ್ಯಂತ ಹನಿಮೂನ್ ಪ್ರಕರಣ ಬಗ್ಗೆ ಚರ್ಚೆ ನಡೆದಿರುವ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಮದುವೆ ಆದ ಮೂರೇ ವಾರಕ್ಕೆ ಪತಿಯನ್ನು ಪತ್ನಿ ಕೊಲೆಗೈದ ಮತ್ತೊಂದು ಭೀಕರ ಘಟನೆ ನಡೆದಿದೆ.

ಮನೆಯಲ್ಲಿ ಮಲಗಿದ್ದ ಪತಿ ತಲೆಗೆ ಕುಡುಗೋಲಿನಿಂದ ಪತ್ನಿ ಹಲ್ಲೆ ಮಾಡಿದ್ದು, ಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸಾಂಗ್ಲಿಯಲ್ಲಿ ನಡೆದಿದೆ.

ಮೇ 23ರಂದು ರಾಧಿಕಾ ಲೋಖಂಡೆ ಮತ್ತು ಅನಿಲ್ ಲೋಖಂಡೆ ಮದುವೆ ಆಗಿದ್ದು, ಮದುವೆ ಆದ ಬೆನ್ನಲ್ಲೇ ದಂಪತಿ ನಡುವೆ ಜಗಳ ಶುರುವಾಗಿದೆ. ಜೂನ್ 10ರಂದು ರಾತ್ರಿ ಅನಿಲ್ ಮಲಗಿದ್ದಾಗ ಆತನ ಮೇಲೆ ಕುಡುಗೋಲಿನಿಂದ ರಾಧಿಕಾ ದಾಳಿ ಮಾಡಿದ್ದಾಳೆ.

ಪತಿ ಮೇಲೆ ಹಲ್ಲೆ ಮಾಡಿದ ಬೆನ್ನಲ್ಲೇ ರಾಧಿಕ ತನ್ನ ಸೋದರ ಸಂಬಂಧಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಪೊಲೀಸರು ಬಂಧಿಸಿ ಆಕೆಯನ್ನು 2 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ರಾಧಿಕಾಳ ವಿಚಾರಣೆ ನಡೆಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಮಧ್ಯಪ್ರದೇಶದ ಇಂಧೋರ್ ನಲ್ಲಿ ಉದ್ಯಮಿ ರಾಜ ರಘುವಂಶಿಯನ್ನು ಪತ್ನಿ ಸೋನಾಲಿ ಹನಿಮೂನ್ ಗೆ ಹೋಗೋಣ ಎಂದು ಕರೆದೊಯ್ದು ಕೊಲೆ ಮಾಡಿದ ಭೀಕರ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments