Friday, May 15, 2026
Google search engine
Homeವಿದೇಶಅಮೆರಿಕದ ವಾಯುನೆಲೆ ಮೇಲೆ ಇರಾನ್ ದಾಳಿ!

ಅಮೆರಿಕದ ವಾಯುನೆಲೆ ಮೇಲೆ ಇರಾನ್ ದಾಳಿ!

ಕತಾರ್ ನಲ್ಲಿರುವ ಅಮೆರಿಕ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ತನ್ನ ಮೇಲೆ ನಡೆದ ದಾಳಿಗೆ ಪ್ರತಿದಾಳಿ ನಡೆಸಿದೆ.

ಕತಾರ್ ರಾಜಧಾನಿ ದೋಹಾದಲ್ಲಿ ದೊಡ್ಡ ಸ್ಫೋಟ ಸಂಭವಿಸಿದ್ದು, ಅಮೆರಿಕ ರಾಯಭಾರ ಕಚೇರಿ ಕೂಡ ಇಲ್ಲಿ ಇದೆ.

ಇರಾನ್ ನ ಅಣು ಸ್ಥಾವರದ ಮೇಲೆ ದಾಳಿ ಮಾಡಿದ್ದ ಅಮೆರಿಕ ವಿವಿಧ ದೇಶಗಳಲ್ಲಿರುವ ವಾಯುನೆಲೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಾಗರಿಕರು ಮುಂದಿನ ಆದೇಶದವರೆಗೆ ದಾಳಿ ಭೀತಿ ಇದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವ ಮೂಲಕ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ಇರಾನ್ ಸಾಳಿ ನಡೆಸಿದೆ.

ಜಗತ್ತಿನ ಅತ್ಯಂತ ಹೆಚ್ಚು ವ್ಯಾಪಾರ ದಟ್ಟಣೆಯ ದೋಹಾ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಕತಾರ್ ಮುಚ್ಚಿದೆ. ಇದರಿಂದ ಸಾವು ನೋವಿನ ಪ್ರಮಾಣ ತೀರಾ ಕಡಿಮೆ ಇದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments