Monday, May 25, 2026
Google search engine
Homeತಂತ್ರಜ್ಞಾನಶೇ.75ರಷ್ಟು ಜನ ಸ್ವಚ್ಛತೆಗೆ 1 ಗಂಟೆ ಮೀಸಲಿಡುತ್ತಾರೆ: ಡೈಸನ್ ಗ್ಲೋಬಲ್ ವೆಟ್ ಕ್ಲೀನಿಂಗ್ ಅಧ್ಯಯನ

ಶೇ.75ರಷ್ಟು ಜನ ಸ್ವಚ್ಛತೆಗೆ 1 ಗಂಟೆ ಮೀಸಲಿಡುತ್ತಾರೆ: ಡೈಸನ್ ಗ್ಲೋಬಲ್ ವೆಟ್ ಕ್ಲೀನಿಂಗ್ ಅಧ್ಯಯನ

ಡೈಸನ್ ತನ್ನ ಮೊದಲ ಗ್ಲೋಬಲ್ ವೆಟ್ ಕ್ಲೀನಿಂಗ್ ಅಧ್ಯಯನದ ಫಲಿತಾಂಶಗಳನ್ನು ಪ್ರಕಟಿಸಿದ್ದು ಜನರು ತೇವಾಂಶದ ಸ್ವಚ್ಛತೆಯ ಸಾಧನಗಳೊಂದಿಗೆ ಎದುರಿಸುವ ವೆಟ್ ಕ್ಲೀನಿಂಗ್ ಅಭ್ಯಾಸಗಳು, ವರ್ತನೆಗಳು, ಸಂಕಷ್ಟಗಳು ಮತ್ತು ಏಕೆ ನಮ್ಮ ಅತ್ಯುತ್ತಮ ಉದ್ದೇಶಗಳು ನಾವು ನಿರೀಕ್ಷಿಸಿದ ಸ್ವಚ್ಛತೆಯ ಮನೆಗಳನ್ನು ನೀಡಲಾರವು ಎನ್ನುವುದರ ಕುರಿತು ಅಧ್ಯಯನ ಮಾಡಿದೆ.

ಅಧ್ಯಯನದ ಪ್ರಕಾರ ಒರಟು ನೆಲ ಭಾರತದ ಮನೆಗಳಲ್ಲಿ ಹೆಚ್ಚಾಗಿದ್ದು ಶೇ.94.5ರಷ್ಟು ಜನರು ತಮ್ಮ ನೆಲಗಳನ್ನು ಟೈಲ್ಸ್, ಕಲ್ಲು ಅಥವಾ ಮರದಂತಹ ವಸ್ತುಗಳನ್ನು ಬಳಸಿ ರೂಪಿಸಿದ್ದು ಅವು ಧೂಳನ್ನು ಸುಲಭವಾಗಿ ಆಕರ್ಷಿಸುತ್ತವೆ.

ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾಗಳಲ್ಲಿ ವೆಟ್ ಕ್ಲೀನಿಂಗ್ ಪ್ರತಿಕ್ರಿಯಾತ್ಮಕ, ಅಪರೂಪಕ್ಕೊಮ್ಮೆ ಅಥವಾ ಬಹಳ ಅವ್ಯವಸ್ಥೆಯ ಸಂದರ್ಭಗಳಲ್ಲಿ ಮಾತ್ರ ನಡೆಯುತ್ತದೆ, ಭಾರತದಲ್ಲಿ ವೆಟ್ ಕ್ಲೀನಿಂಗ್ ಎನ್ನುವುದು ಇಲ್ಲಿನ ದಿನಚರಿಯ ಭಾಗವಾಗಿದೆ.

ವರದಿ ಮುಖ್ಯಾಂಶಗಳು

ಶೇ.75ರಷ್ಟು ಮಂದಿ ಸ್ವಚ್ಛತೆಗೆ ಒಂದು ಗಂಟೆಗೂ ಮೇಲ್ಪಟ್ಟು ಸಮಯ ನೀಡುತ್ತಿದ್ದಾರೆ.

ಭಾರತೀಯರು ಮಾಪ್ ಗಳು, ಪೊರಕೆಗಳು ಮತ್ತು ತೇವದ ಬಟ್ಟೆಗಳನ್ನು ಬಳಸುತ್ತಿದ್ದು ಅವು ಅತ್ಯಂತ ಹೆಚ್ಚು ಎಪಿಎಸಿ ಒಳಗೊಂಡಿರುತ್ತವೆ.

ಶೇ.49ರಷ್ಟು ಮಂದಿ ಅವರು ಪ್ರತಿ ಕೋಣೆಗೂ ಸ್ವಚ್ಛಗೊಳಿಸುವ ನೀರನ್ನು ಬದಲಾಯಿಸುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ.

ಶೇ.45ರಷ್ಟು ಮಂದಿ ಕಠಿಣ ಕಲೆಗಳು ಅವರ ಪ್ರಮುಖ ಸ್ವಚ್ಛತೆಯ ಸವಾಲು ಎಂದು ಹೇಳುತ್ತಾರೆ ಮತ್ತು ಶೇ.31ರಷ್ಟು ಮಂದಿ ಒದ್ದೆ ನೆಲದ ಮೇಲೆ ಜಾರುವ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ.

ಡೈಸೆನ್ ವಾಷ್ ಜಿ1 ಬಿಡುಗಡೆ

ಧೂಳು ಮತ್ತು ವೆಟ್ ಸೈನ್ಸ್ ನಲ್ಲಿ ದಶಕಗಳ ಪರಿಣಿತಿಯನ್ನು ಸಂಯೋಜಿಸಿ ಡೈಸನ್ ಒದ್ದೆ ನೆಲವನ್ನು ಸ್ವಚ್ಛಗೊಳಿಸುವ ಸ್ವಚ್ಛತೆಯ ಮೊದಲ ಡೈಸನ್ ವಾಷ್ ಜಿ1ಬಿಡುಗಡೆ ಮಾಡಿದೆ.

ಒದ್ದೆ ಹಾಗೂ ಒಣ ಕಸವನ್ನು ಒಂದೇ ಸಲಕ್ಕೆ ಹೀರಿಕೊಳ್ಳುವಂತೆ ರೂಪಿಸಿರುವ ಡೈಸನ್ ವಾಷ್ ಜಿ1 ಕಠಿಣ ಕಲೆಗಳು ಮತ್ತು ಕೂದಲು ಕೂಡಾ ಸಂಗ್ರಹಿಸುವಂತೆ ಹೈಡ್ರೇಷನ್ ಹೀರಿಕೊಳ್ಳುವಿಕೆ ಮತ್ತು ಹೊರತೆಗೆಯುವ ತಂತ್ರಜ್ಞಾನಗಳನ್ನು ಹೊಂದಿದೆ. ಈ ಯಂತ್ರ ಶೇ.30ರಷ್ಟು ಕಲೆಗಳನ್ನು ನಿವಾರಿಸುತ್ತದೆ ಮತ್ತು ನೆಲವನ್ನು ಸಾಂಪ್ರದಾಯಿಕ ಮಾಪಿಂಗ್ ಗೆ ಹೋಲಿಸಿದರೆ ಶೇ.80ರಷ್ಟು ವೇಗದಲ್ಲಿ ಒಣಗಿಸುತ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments