Saturday, July 18, 2026
Google search engine
Homeತಂತ್ರಜ್ಞಾನವಾಟ್ಸಪ್ ನಿಂದ ಬಳಕೆದಾರರ ಹೆಸರು ಬಳಕೆಗೆ ಕೇಂದ್ರ ತಾತ್ಕಾಲಿಕ ತಡೆ

ವಾಟ್ಸಪ್ ನಿಂದ ಬಳಕೆದಾರರ ಹೆಸರು ಬಳಕೆಗೆ ಕೇಂದ್ರ ತಾತ್ಕಾಲಿಕ ತಡೆ

ನವದೆಹಲಿ: ವಾಟ್ಸಪ್ ನಲ್ಲಿ ಪರಿಚಯಿಸಲು ಉದ್ದೇಶಿಸಿರುವ ಯೂಸರ್ ನೇಮ್ (ಬಳಕೆದಾರಹೆಸರು) ವೈಶಿಷ್ಟ್ಯವನ್ನು ಭಾರತದಲ್ಲಿ ತಕ್ಷಣ ಜಾರಿಗೆ ತರಬಾರದು ಎಂದು ಕೇಂದ್ರ ಸರ್ಕಾರ ಮೆಟಾ ಕಂಪನಿಗೆ ಸೂಚಿಸಿದೆ.

ಪ್ರಸ್ತುತ ವಾಟ್ಸಪ್ ನಲ್ಲಿ ಹೊಸ ವ್ಯಕ್ತಿಯನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆ ಅಗತ್ಯವಾಗಿರುತ್ತದೆ. ಹೊಸ Username ವ್ಯವಸ್ಥೆಯಲ್ಲಿ, ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸದೆ, ವಿಶಿಷ್ಟ ಬಳಕೆದಾರ ಹೆಸರಿನ ಮೂಲಕ ಇತರರೊಂದಿಗೆ ಸಂಪರ್ಕ ಸಾಧಿಸಬಹುದು. ಇದರ ಉದ್ದೇಶ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವುದಾಗಿದೆ.

ಆದರೆ ಕೇಂದ್ರ ಸರ್ಕಾರ ಈ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ವಂಚಕರು ಅಥವಾ ಸೈಬರ್ ಅಪರಾಧಿಗಳು ಸರ್ಕಾರಿ ಇಲಾಖೆ, ಬ್ಯಾಂಕ್, ಕಂಪನಿ ಅಥವಾ ಪ್ರಸಿದ್ಧ ವ್ಯಕ್ತಿಗಳ ಹೆಸರಿನಂತೆಯೇ ಕಾಣುವ ಬಳಕೆದಾರರ ಹೆಸರು (ಯೂಸರ್ ನೇಮ್) ಗಳನ್ನು ಸೃಷ್ಟಿಸಿ ಜನರನ್ನು ವಂಚಿಸುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ನಕಲಿ ಗುರುತು ಪ್ರಕರಣಗಳು ಹೆಚ್ಚಾಗಬಹುದು. ಆನ್‌ಲೈನ್ ವಂಚನೆಗಳು ಹೆಚ್ಚುವ ಸಾಧ್ಯತೆ ಇದೆ. ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗೆ ಸವಾಲು ಉಂಟಾಗಬಹುದು. ಅಲ್ಲದೇ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗಬಹುದು ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಂದ್ರ ಮುಂದಿಟ್ಟಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ವೈಶಿಷ್ಟ್ಯದಿಂದ ಉಂಟಾಗಬಹುದಾದ ಅಪಾಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೂಸರ್ ನೇಮ್ ವೈಶಿಷ್ಟ್ಯದಲ್ಲಿ ದುರುಪಯೋಗವನ್ನು ತಡೆಯಲು ಹಲವು ಭದ್ರತಾ ಕ್ರಮಗಳನ್ನು ಸೇರಿಸಲಾಗಿದೆ. ಆದಾಗ್ಯೂ, ಸರ್ಕಾರವು ಆ ಕ್ರಮಗಳಿಗೆ ಒಪ್ಪಿಗೆ ನೀಡಿದರೆ ಮಾತ್ರ ಜಾರಿಗೆ ತರಲಾಗುವುದು ಎಂದು ಮೆಟಾ ಸಂಸ್ಥೆ ಸ್ಪಷ್ಟಪಡಿಸಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಗತ್ಯವಿದ್ದರೆ ಸರ್ಕಾರ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಬಹುದು ಅಥವಾ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಬಹುದು. ಆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಯೂಸರ್ ನೇಮ್ ವೈಶಿಷ್ಟ್ಯದ ವ್ಯಾಪಕ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments