ಕೆಜಿಎಫ್-2 ನಂತರ ಯಶ್ ನಟಿ ನಿರ್ಮಾಪಕರೂ ಆಗಿರುವ ರಾಮಾಯಣ ಚಿತ್ರದ ಝಲಕ್ ಗುರುವಾರ ಬಿಡುಗಡೆ ಮಾಡಿದ್ದು, ಚಿತ್ರದ ಗ್ರಾಫಿಕ್ಸ್ ಎಫೆಕ್ಟ್ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ರಾಮನಾಗಿ ರಣಭೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೊಲ್ ಹಾಗೂ ರಾವಣನಾಗಿ ಯಶ್ ನಟಿಸುತ್ತಿರುವ ಈ ಚಿತ್ರ 835 ಕೋಟಿ ರೂ. ಬೃಹತ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ.
ಭಾರತದ 9 ನಗರಗಳ ಥಿಯೇಟರ್ ಗಳಲ್ಲಿ ಅಮೆರಿಕದ ಸ್ಕಾರ್ ನಲ್ಲೂ ರಾಮಾಯಣದ ಗ್ಲಿಪ್ಸ್ ಬಿಡುಗಡೆ ಆಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಮಾಯಣವನ್ನು ಹೊಸ ರೂಪದಲಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್ ನೊಂದಿಗೆ ತೆರೆಗೆ ಅಪ್ಪಳಿಸಲಿದ್ದು, ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.
ರಾಮಾಯಣ ಮತ್ತು ಟಾಕ್ಸಿಕ್ಸ್ ಚಿತ್ರಗಳ ಚಿತ್ರೀಕರಣ ಮುಗಿಸಿರುವ ಯಶ್ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ಕೆಜಿಎಫ್-2 ನಂತರ ಯಶ್ ಕಾಣಿಸಿಕೊಳ್ಳುತ್ತಿರುವ ಚಿತ್ರಗಳು ಇವಾಗಿವೆ.



