Thursday, May 14, 2026
Google search engine
Homeಅಪರಾಧಮೂರಡಿ ಜಾಗಕ್ಕಾಗಿ ಸಾಂಬರಿನಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನ: ಒಂದೇ ಕುಟುಂಬದ 8 ಮಂದಿ ಅಸ್ವಸ್ಥ

ಮೂರಡಿ ಜಾಗಕ್ಕಾಗಿ ಸಾಂಬರಿನಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನ: ಒಂದೇ ಕುಟುಂಬದ 8 ಮಂದಿ ಅಸ್ವಸ್ಥ

ಮೂರು ಅಡಿ ಜಾಗಕ್ಕಾಗಿ ನಡೆದ ಜಗಳದಲ್ಲಿ ಸೇಡು ತೀರಿಸಿಕೊಳ್ಳಲು ಸಾಂಬಾರಿಗೆ ವಿಷ ಬೆರೆಸಿ ಕೊಲೆಗೆ ಯತ್ನ ನಡೆದಿದ್ದು, ಒಂದೇ ಕುಟುಂಬದ 8 ಮಂದಿ ಅಸ್ವಸ್ಥಗೊಂಡಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗ್ಯನಗರ (ಬಾಗೇಪಲ್ಲಿ) ತಾಲೂಕಿನ ದೇವಿರೆಡ್ಡಿಪಲ್ಲಿಯಲ್ಲಿ ಒಂದೇ ಕುಟುಂಬದ 8 ಜನ ವಿಷ ಸೇವಿಸಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಮನೆ ಯಜಮಾನಿ ಮದ್ದಕ್ಕ ಹಾಗೂ ಇವರ ಇಬ್ಬರು ಮಕ್ಕಳಾದ ಮದ್ದರೆಡ್ಡಿ ಹಾಗೂ ಮಂಜುನಾಥ್ ಸೇರಿದಂತೆ ಮದ್ದರೆಡ್ಡಿ ಪತ್ನಿ ಭಾಗ್ಯಮ್ಮ, ಮಗಳು ಮಣಿ, ಮಂಜುನಾಥ್ ಪತ್ನಿ ಈಶ್ವರಮ್ಮ, ಮಂಜುನಾಥ್ ನ ಮಗ ಸುಬ್ರಮಣಿ, ಹಾಗೂ ಸಂಬಂಧಿ ಬಾಲಕಿ ಭಾನುಶ್ರೀ ಈ ಎಂಟೂ ಜನ ಅಸ್ವಸ್ಥರಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಪಾಪಿರೆಡ್ಡಿ ಹಾಗೂ ಚೌಡರೆಡ್ಡಿಯನ್ನು ಬಂಧಿಸಲಾಗಿದೆ.

ದೇವಿರೆಡ್ಡಿಪಲ್ಲಿಯ ಮದ್ದರೆಡ್ಡಿ ಮತ್ತು ಪಾಪಿರೆಡ್ಡಿ ಎಂಬುವವರು ಅಕ್ಕಪಕ್ಕದ ಮನೆಯವರಾಗಿದ್ದು, ಎರಡು ವರ್ಷಗಳ ಮೂರಡಿ ಖಾಲಿ ಜಾಗದ ಸಲುವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು.

ಇದೇ ದ್ವೇಷದ ಹಿನ್ನೆಲೆಯಲ್ಲಿ ಚೌಡರೆಡ್ಡಿ ಎಂಬಾತನಿಗೆ ಸುಪಾರಿ ಕೊಟ್ಟ ಪಾಪಿರೆಡ್ಡಿ ಆಹಾರದಲ್ಲಿ ವಿಷ ಬೆರೆಸುವಂತೆ ಹೇಳಿದ್ದ. ಅಂತೆಯೇ ಮದ್ದರೆಡ್ಡಿಯ ಅಡುಗೆ ಮನೆಗೆ ನೀರು ಕುಡಿಯುವ ನೆಪದಲ್ಲಿ ತೆರಳಿದ್ದ ಚೌಡರೆಡ್ಡಿ, ಸಾಂಬಾರಿಗೆ ವಿಷದ ಪೌಡರ್ ಬರೆಸಿದ್ದ.

ವಿಷ ಸೇವಿಸಿದ ಮೂವರ ಸ್ಥಿತಿ ಚಿಂತಾಜನಕ

ಕುಟುಂಬಸ್ಥರು ಎಂದಿನಂತೆ ಊಟ ಮಾಡಿದ್ದು, ಊಟ ಮಾಡಿದ ಕೆಲವೇ ನಿಮಿಷಗಳಲ್ಲಿ ಹೊಟ್ಟೆ ನೋವು ಬಂದು ಅಸ್ವಸ್ಥರಾಗಿ ನರಳಾಡಿದ್ದಾರೆ. ಕೂಡಲೇ ಅಕ್ಕಪಕ್ಕದ ಮನೆಯವರು ನೆರವಿಗೆ ಧಾವಿಸಿದ್ದಾರೆ.

ಈ 8 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮಂಜುನಾಥ್ ಹಾಗೂ ಮದ್ದರೆಡ್ಡಿ ಸೇರಿದಂತೆ ಸುಬ್ರಮಣಿ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿರಿಸಲಾಗಿದೆ. ಉಳಿದ 5 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರೂ ದೇಹದೊಳಗೆ ವಿಷ ಸೇರಿರುವುದರಿಂದ ಮುನ್ನೆಚ್ಚರಿಕೆ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ.

ಎಸ್ಪಿ ಕುಶಲ್ ಚೌಕ್ಸೆ ಸೇರಿದಂತೆ ಬಾಗೇಪಲ್ಲಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments