Monday, June 29, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಒಂದೇ ದಿನ 2 ಬಲಿ

ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಒಂದೇ ದಿನ 2 ಬಲಿ

ಬೆಂಗಳೂರು: ಬಿಎಂಟಿಸಿ ಬಸ್​ಗಳಿಂದ ಸಂಭವಿಸುವ ಅಪಘಾತಗಳು ಮುಂದುವರೆದಿದ್ದು, ಗುರುವಾರ ಒಂದೇ ದಿನ ನಗರದ ಎರಡು ಪ್ರತ್ಯೇಕ ಕಡೆಗಳಲ್ಲಿ ಇಬ್ಬರು ವೃದ್ಧರು ಬಲಿಯಾಗಿದ್ದಾರೆ.

ನಡೆದುಕೊಂಡು ಹೋಗುತ್ತಿದ್ದ ತರಕಾರಿ ವ್ಯಾಪಾರಿಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್​​​ ಆತನ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿವಾಳ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ನಡೆದಿದೆ.

ಬೊಮ್ಮನಹಳ್ಳಿ ರೂಪೇನಾ ಅಗ್ರಹಾರದ ವೆಂಕಟರಾಮಯ್ಯ (63) ಮೃತಪಟ್ಟರು, ಸೊಪ್ಪು ತರಕಾರಿ ವ್ಯಾಪಾರ ಮಾಡುತ್ತಿದ್ದ ವೆಂಕಟರಾಮಯ್ಯ ಮಡಿವಾಳ ಮಾರ್ಕೆಟ್​ಗೆ ಸೊಪ್ಪು ಖರೀದಿಸಲು ಬಂದಿದ್ದರು.

ವ್ಯಾಪಾರ ಮುಗಿಸಿಕೊಂಡು ಬೆಳಿಗ್ಗೆ 6.30 ಸುಮಾರಿಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಬಸ್ ಮುಂದೆ ಹೋಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಗುದ್ದಿದ ಬಳಿಕ ವೆಂಕಟರಾಮಯ್ಯ ಅವರಿಗೆ ಡಿಕ್ಕಿ ಹೊಡೆದಿದೆ.

ಬಸ್​ನ ಚಕ್ರ ವೆಂಕಟರಾಮಯ್ಯ ಮೇಲೆ ಹರಿದ ಪರಿಣಾಮ ಅವರು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್​ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ

ವೃದ್ಧೆ ಸಾವು:

ಗೋವಿಂದರಾಜನಗರದ ಸರ್ವಜ್ಞ ಪಬ್ಲಿಕ್ ಶಾಲೆ ಬಳಿ ವೃದ್ಧೆ ಮೇಲೆ ಬಿಎಂಟಿಸಿ ಹರಿದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ 11.30ರ ಸುಮಾರಿಗೆ ನಡೆದಿದೆ.

ಸುಶೀಲಾ (61) ಮೃತಪಟ್ಟವರು. ಬಸ್​ನಿಂದ ಇಳಿದು ಬಲಭಾಗದ ರಸ್ತೆ ದಾಟುವಾಗ ಆಯತಪ್ಪಿ ಬಿದ್ದ ಪರಿಣಾಮ ಅದೇ ಮಾರ್ಗದಲ್ಲಿ ಬರುತ್ತಿದ್ದ ಬಸ್​ಗೆ ಸಿಲುಕಿದ್ದಾರೆ. ಬಸ್​​ ಚಕ್ರ ವೃದ್ಧೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments