Thursday, May 14, 2026
Google search engine
Homeದೇಶಗಗನಕ್ಕೇರಿದ ಚಿನ್ನ-ಬೆಳ್ಳಿ: ಬಂಗಾರದ ಬೆಲೆ 1.40ಕ್ಕೆ ಜಿಗಿತ, ಬೆಳ್ಳಿ ಕೆಜಿಗೆ 2.40 ಲಕ್ಷ!

ಗಗನಕ್ಕೇರಿದ ಚಿನ್ನ-ಬೆಳ್ಳಿ: ಬಂಗಾರದ ಬೆಲೆ 1.40ಕ್ಕೆ ಜಿಗಿತ, ಬೆಳ್ಳಿ ಕೆಜಿಗೆ 2.40 ಲಕ್ಷ!

ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಶುಕ್ರವಾರವೂ ಗಗನಮುಖಿಯಾಗಿದ್ದು, ಆಭರಣ ಪ್ರಿಯರಿಗೆ ದೊಡ್ಡ ಆಘಾತವುಂಟು ಮಾಡಿದೆ.

ಶುಕ್ರವಾರ ಚಿನ್ನದ ಬೆಲೆ 10 ಗ್ರಾಂಗೆ 1.40 ಲಕ್ಷ ರೂ. ಗಡಿದಾಟಿದೆ. ಇದರೊಂದಿಗೆ 2025 ಮುಗಿದು ಹೊಸ ವರ್ಷಕ್ಕೆ ಕಾಲಿಡುವ ವೇಳೆಗೆ ಚಿನ್ನದ ಬೆಲೆ ಒಂದೂವರೆ ಲಕ್ಷ ರೂ. ಗಡಿ ದಾಟುವ ಸಾಧ್ಯತೆ ಇದೆ.

ಶುಕ್ರವಾರ 24 ಕ್ಯಾರೆಟ್ ಚಿನ್ನದ ಬೆಲೆ 770 ರೂ. ಹೆಚ್ಚಾಗಿದೆ ಮತ್ತು 10 ಗ್ರಾಂಗೆ 1,40,020 ರೂ.ಗೆ ಲಭ್ಯವಿದೆ. ಅದೇ ರೀತಿ, ಬೆಳ್ಳಿಯ ಬೆಲೆಯೂ 6,000 ರೂ. ತೀವ್ರ ಏರಿಕೆಯನ್ನು ಕಂಡಿದೆ ಮತ್ತು ಪ್ರತಿ ಕೆಜಿಗೆ 2.4 ಲಕ್ಷ ರೂ.ಗೆ ಲಭ್ಯವಿದೆ.

ಶುಕ್ರವಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 1,40,020 ರೂ. ಆಗಿದ್ದು, ನಿನ್ನೆ ಪ್ರತಿ ಗ್ರಾಂಗೆ 1,39,250  ರೂ. ಇತ್ತು. ಇಂದಿನ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 128,350 ರೂ.  ಆಗಿದ್ದು, ನಿನ್ನೆಯ ಪ್ರತಿ ಗ್ರಾಂಗೆ 127,650 ರೂ. ರಿಂದ 700 ರೂ. ಗೆ ಹೆಚ್ಚಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 105,020 ರೂ. ಆಗಿದ್ದು, ಗುರುವಾರ ಪ್ರತಿ ಗ್ರಾಂಗೆ 104,440 ರೂ. ನಿಂದ 580 ರೂ.ಗೆ ಹೆಚ್ಚಾಗಿದೆ. ಭಾರತದಲ್ಲಿ ಇಂದಿನ 10 ಗ್ರಾಂ ಬೆಳ್ಳಿಯ ಬೆಲೆ 24,000 ರೂ. ಆಗಿದೆ. ಅದೇ ರೀತಿ, 1 ಕೆಜಿ ಬೆಳ್ಳಿಯ ಬೆಲೆ 240,000 ರೂ. ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments