Monday, June 1, 2026
Google search engine
Homeಮನರಂಜನೆನಟ ಮೋಹನ್ ಲಾಲ್ ಗೆ ಮಾತೃವಿಯೋಗ: ಮಮ್ಮುಟ್ಟಿ ಸಂತಾಪ

ನಟ ಮೋಹನ್ ಲಾಲ್ ಗೆ ಮಾತೃವಿಯೋಗ: ಮಮ್ಮುಟ್ಟಿ ಸಂತಾಪ

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ಲಾಲ್ ತಾಯಿ ಶಾಂತಕುಮಾರಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ತಿರುವನಂತಪುರಂನಲ್ಲಿ ವಾಸವಾಗಿದ್ದ ತಾಯಿ ಶಾಂತಕುಮಾರಿಗೆ ಹಲವು ವರ್ಷಗಳ ಹಿಂದೆಯೇ ಪಾರ್ಶ್ವವಾಯು ಪೀಡಿತರಾಗಿದ್ದು, ಕೊಚ್ಚಿಗೆ ಕರೆದುಕೊಂದು ಬಂದು ಮೋಹನ್​​ಲಾಲ್ ಚಿಕಿತ್ಸೆ ಕೊಡಿಸುತ್ತಿದ್ದರು. ಕಳೆದ 10 ವರ್ಷಗಳಿಂದ ಶಾಂತಕುಮಾರಿ ಅವರು ಹಾಸಿಗೆ ಹಿಡಿದಿದ್ದರು. ಎರ್ನಾಕುಲಂ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು.

ಶಾಂತಕುಮಾರಿ ಎರ್ನಾಕಲಮ್ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ ಕೊನೆಯುಸಿರು ಎಳೆದರು. ಶಾಂತಕುಮಾರಿ ನಿಧನದ ವೇಳೆ ಮೋಹನ್​​ಲಾಲ್ ಚಿತ್ರೀಕರಣಕ್ಕಾಗಿ ಹೊರಗೆ ಹೋಗಿದ್ದರು. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮೋಹನ್ ಲಾಲ್ ಚಿತ್ರೀಕರಣ ರದ್ದುಗೊಳಿಸಿ ಮನೆಗೆ ಮರಳಿದ್ದಾರೆ.

ಶಾಂತಕುಮಾರಿ ನಿಧನದಿಂದಾಗಿ ಮೋಹನ್​​ಲಾಲ್ ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಸ್ನೇಹಿತರು ಮತ್ತು ಆಪ್ತರು ಬಂದು ಸಂತಾಪ ಸೂಚಿಸುತ್ತಿದ್ದಾರೆ. ಖ್ಯಾತ ನಟ ಮಮ್ಮುಟಿ ಅವರು ಆಗಮಿಸಿ ಶಾಂತಕುಮಾರಿ ಅವರ ಅಂತಿಮ ದರ್ಶನ ಪಡೆದರು.

ಮೋಹನ್​ಲಾಲ್ ಅವರ ಸಾಧನೆಗೆ ತಾಯಿ ಶಾಂತಕುಮಾರಿ ಅವರು ಪ್ರೇರಣೆ ಆಗಿದ್ದರು. ಈ ವರ್ಷ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಕೂಡಲೇ ಕೊಚ್ಚಿಯಲ್ಲಿರುವ ಅಮ್ಮನನ್ನು ಮೊದಲು ಭೇಟಿ ಮಾಡಿ ಸಂತಸ ಹಂಚಿಕೊಂಡಿದ್ದರು.

ಶಾಂತಕುಮಾರಿ ಅವರ ಪತಿ ವಿಶ್ವನಾಥ್ ನಾಯರ್ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಅವರು ಕೂಡ ಅನಾರೋಗ್ಯದಿಂದ ಮೃತರಾಗಿದ್ದರು. ಹಿರಿಯ ಮಗ ಪ್ಯಾರೆಲಾಲ್ ಅವರು 2000ನೇ ಇಸವಿಯಲ್ಲಿ ಮರಣಹೊಂದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments