Wednesday, May 13, 2026
Google search engine
Homeದೇಶಭಾನುವಾರ ಕೇಂದ್ರ ಬಜೆಟ್‌ ಮಂಡನೆ: ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿರುವ ನಿರ್ಮಲಾ ಸೀತಾರಾಮನ್‌

ಭಾನುವಾರ ಕೇಂದ್ರ ಬಜೆಟ್‌ ಮಂಡನೆ: ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿರುವ ನಿರ್ಮಲಾ ಸೀತಾರಾಮನ್‌

ಫೆಬ್ರವರಿ 1 ಭಾನುವಾರದಂದು ೨೦೨೬-೨೭ನೇ ಸಾಲಿನ ಬಜೆಟ್‌ ಮಂಡಿಸುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ.

ಫೆಬ್ರವರಿ 1ರಂದು ಬಜೆಟ್‌ ಮಂಡನೆಗೆ ಕೇಂದ್ರ ಸರ್ಕಾರ ದಿನಾಂಕ ನಿಗದಿಪಡಿಸಿದ್ದು, ಜನವರಿ ೨೯ರಂದು ಆರ್ಥಿಕ ಸಮೀಕ್ಷೆ ವರದಿ ಮಂಡನೆ ಮಾಡಲಿದೆ.

1999ರಲ್ಲಿ ಮೊದಲ ಬಾರಿ ಭಾನುವಾರದಂದು ಬಜೆಟ್‌ ಮಂಡನೆ ಆಗಿದ್ದು. ಆದಾದ ನಂತರ ಇತಿಹಾಸದಲ್ಲಿ ಎರಡನೇ ಬಾರಿ ಭಾನುವಾರದಂದು ಬಜೆಟ್‌ ಮಂಡನೆ ಆಗಲಿದೆ. ಸಾಮಾನ್ಯವಾಗಿ ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ಲೋಕಸಭೆ ಅಧಿವೇಶನಕ್ಕೆ ರಜೆ ಇರುತ್ತದೆ.

ಜನವರಿ 28ರಿಂದ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮರ್ಮು ಸಂಸತ್‌ ನ ಉಭಯ ಸದನಗಳನ್ನೊಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಸೇರಿದಂತೆ ಪ್ರಮುಖರು ಉಪಸ್ಥಿತರಾಗಲಿದ್ದಾರೆ.

1999 ಫೆಬ್ರವರಿ 28ರಂದು ಭಾನುವಾರ ಮೊದಲ ಬಾರಿಗೆ ಅಂದಿನ ಕೇಂದ್ರ ಹಣಕಾಸು ಸಚಿವರಾಗಿದ್ದ ಯಶವಂತ್‌ ಸಿನ್ಹಾ 1999-2000ನೇ ಸಾಲಿನ ಬಜೆಟ್‌ ಮಂಡಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments