Thursday, September 19, 2024
Google search engine
Homeತಾಜಾ ಸುದ್ದಿ26 ವಯಸ್ಸಿಗೆ ನೀಲಿ ಚಿತ್ರ ತಾರೆ ಸೋಫಿಯಾ ಲಿಯೊನ್ ಶವವಾಗಿ ಪತ್ತೆ!

26 ವಯಸ್ಸಿಗೆ ನೀಲಿ ಚಿತ್ರ ತಾರೆ ಸೋಫಿಯಾ ಲಿಯೊನ್ ಶವವಾಗಿ ಪತ್ತೆ!

ನೀಲಿ ಚಿತ್ರ ತಾರೆ ಸೋಫಿಯಾ ಲಿಯೊನ್ ಕೆಲವು ದಿನಗಳ ಹಿಂದೆ ಶವವಾಗಿ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. ಆಕೆಗೆ ಇನ್ನೂ 26 ವರ್ಷ ವಯಸ್ಸಾಗಿತ್ತು.

ಮಾರ್ಚ್ 1ರಂದು ಅಮೆರಿಕದ ಮಿಯಾಮಿಯ ತನ್ನ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಆಕೆಯ ಮಲ ತಂದೆ ಮೈಕ್ ರೊಮೆರೊ ತಿಳಿಸಿದ್ದಾರೆ.

ಸೋಫಿಯಾ ಲಿಯೊನ್ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟಿರುವುದು ಆಕೆಯ ಕುಟುಂಬಕ್ಕೆ ಆಘಾತ ನೀಡಿದ್ದು, ಆಕೆಯ ಸಾವಿಗೆ ಕಾರಣರಾದವರನ್ನು ಶಿಕ್ಷಿಸಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸೋಫಿಯಾ ಸಾವಿನ ಸುದ್ದಿಯನ್ನು ಆಕೆಯ ಮಾಡೆಲಿಂಗ್ ಕಂಪನಿಯಾದ 101 ಮಾಡೆಲಿಂಗ್ ಸಂಸ್ಥೆ ಕೂಡ ದೃಢಪಡಿಸಿದ್ದು, ಸೋಫಿಯಾ ನಿಧನದಿಂದ ಆಘಾತ ಉಂಟಾಗಿದ್ದು, ಆತ್ಮೀಯರನ್ನು ಕಳೆದುಕೊಂಡಷ್ಟು ನೋವು ತಂದಿದೆ ಎಂದು ಹೇಳಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments