Wednesday, July 1, 2026
Google search engine
Homeರಾಜ್ಯಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟ: ಶಿಕ್ಷಕರಿಗೂ ಮೊಬೈಲ್ ನಿಷೇಧ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟ: ಶಿಕ್ಷಕರಿಗೂ ಮೊಬೈಲ್ ನಿಷೇಧ

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗೆ ಹೊಸದಾಗಿ ಮಾರ್ಗಸೂಚಿ ಹೊರಡಿಸಿರುವ ರಾಜ್ಯ ಸರ್ಕಾರ, ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರಿಗೂ ಮೊಬೈಲ್ ನಿಷಧಿಸಲಾಗಿದೆ.

ಇತ್ತೀಚೆಗೆ ನಡೆದ ಎಸ್ಸೆಸ್ಸೆಲಿ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು, ಪರೀಕ್ಷೆ ವೇಳೆ ಮೊಬೈಲ್ ನಿಷೇಧಿಸಿದೆ. ವಿದ್ಯಾರ್ಥಗಳು ಅಲ್ಲದೇ ಶಿಕ್ಷಕರು ಕೂಡ ಪರೀಕ್ಷೆ ಹಾಲ್ ಒಳಗೆ ಮೊಬೈಲ್ ತರುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸೂಚಿಸಿದೆ.

ಜನವರಿ 27ರಿಂದ ನಡೆಯಲಿರುವ ಎರಡನೇ ಹಂತದ ರಾಜ್ಯಮಟ್ಟದ ಪಿಯು ಪರೀಕ್ಷೆಗಳಿಂದ ಜಾರಿಗೆ ಬರಲಿದೆ. ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಗಳು ಮೊಬೈಲ್ ಮೂಲಕ ಸೋರಿಕೆಯಾಗುವುದನ್ನು ತಡೆಯಲು ಈ ನಿಷೇಧವನ್ನು ಹೇರಲಾಗುತ್ತಿದೆ.

ಪರೀಕ್ಷಾ ಕರ್ತವ್ಯದಲ್ಲಿರುವ ಶಿಕ್ಷಕರು, ಪ್ರಾಂಶುಪಾಲರು ಸೇರಿದಂತೆ ಎಲ್ಲ ಸಿಬ್ಬಂದಿಯ ಮೊಬೈಲ್ ಬಳಕೆಗೆ ಕಡಿವಾಣ ಹಾಕಲಾಗುತ್ತದೆ.

ಇದುವರೆಗೆ ಪರೀಕ್ಷೆಗಳನ್ನು ಪರೀಕ್ಷಾ ಮಂಡಳಿ ಹಾಗೂ ಮೌಲ್ಯ ನಿರ್ಣಯ ಮಂಡಳಿ ನೇತೃತ್ವದಲ್ಲಿ ನಡೆಯುತ್ತಿತ್ತು. ಇದೀಗ 2 ಮತ್ತು 3ನೇ ಆಯುಕ್ತರ ನೇತೃತ್ವದಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments