ಪ್ರಧಾನಿ ಮೋದಿ ಹೆಸರು ಕೂಗುವ ಗಂಡಂದಿರಿಗೆ ರಾತ್ರಿ ಊಟ ಹಾಕಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹಿಳೆರಿಗೆ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ಭಾನುವಾರ ನಡೆದ ಮಹಿಳಾ ಸಮ್ಮಾನ್ ಸಮಾವೇಶದಲ್ಲಿ ಮಾತನಾಡಿದ ಅವರು, ಹಲವು ಪುರುಷರು ಪ್ರಧಾನಿ ಮೋದಿ ಹೆಸರನ್ನು ಕೂಗುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವ ಕೆಲಸ ಮಹಿಳೆಯರು ಮಾಡಬೇಕು. ರಾತ್ರಿ ಊಟ ಹಾಕದಿದ್ದರೆ ಅವರು ಸರಿ ದಾರಿಗೆ ಬರುತ್ತಾರೆ ಎಂದರು.
ಮಹಿಳೆಯರು ತಮ್ಮ ಕುಟುಂಬದ ಸದಸ್ಯರಿಂದ ಮೋದಿಗೆ ಬೆಂಬಲ ನೀಡಬಾರದು ಎಂದು ಪ್ರಮಾಣ ಮಾಡಿಸಿಕೊಳ್ಳಬೇಕು. ಅಲ್ಲದೇ ಬಿಜೆಪಿ ಬೆಂಬಲಿಸುವ ಮಹಿಳೆಯರಿಗೂ ಹೇಳಿ, ನಿಮ್ಮ ಸಹೋದರ ಅರವಿಂದ್ ಕೇಜ್ರಿವಾಲ್ ನಿಮ್ಮ ಜೊತೆಗೆ ಇದ್ದಾನ ಎಂದು ಕರೆ ನೀಡಿದರು.
ನಾವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿದೆವು. ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಇನ್ನು ಮುಂದೆ ಪ್ರತಿ ತಿಂಗಳು 1000 ರೂ. ನೀಡುತ್ತೇವೆ. ಬಿಜೆಪಿ ನಿಮಗೆ ಏನು ಮಾಡಿದೆ. ಈ ಬಾರಿ ಬಿಜೆಪಿಗೆ ಮತ ಹಾಕದೇ ನಮ್ಮನ್ನು ಬೆಂಬಲಿಸಿ ಎಂದು ಅವರು ಕರೆ ನೀಡಿದರು.