ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಿದೆ.
ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿದೆ.
ತೆರಿಗೆ ದರ ಪೆಟ್ರೋಲ್ ಶೇ.25.92 ಇದ್ದದ್ದು, ಈಗ ಶೇ.29.84ಗೆ ಏರಿಕೆ (ಶೇ. 3.9 ಹೆಚ್ಚಳ) ಮಾಡಿದೆ. ಡಿಸೇಲ್ ಈ ಹಿಂದೆ ಶೇ.14.34% ಇದ್ದದ್ದು, ಈಗ ಶೇ.18.44ಗೆ (ಶೇ.4.1 ರಷ್ಟು ಏರಿಕೆ) ಏರಿಕೆ ಕಂಡಿದೆ
ತೆರಿಗೆ ಹೆಚ್ಚಳ ಹಿನ್ನೆಲೆ ಪೆಟ್ರೋಲ್ ದರ 100 ರೂಪಾಯಿ ದಾಟಲಿದೆ. ಈಗ ಪೆಟ್ರೋಲ್ ದರ 99.54 ರೂ. ಇದ್ದು 102 ರೂಪಾಯಿಗೆ ಏರಿಕೆಯಾಗಲಿದೆ. ಇವತ್ತಿನ ಡೀಸೆಲ್ ದರ 85.93 ರೂಪಾಯಿ ಇದೆ. ಅದು 89.43 ರೂ. ಏರಿಕೆಯಾಗಲಿದೆ.