ಅನುಭವಿ ಕೆಎಲ್ ರಾಹುಲ್ ಸಿಡಿಸಿದ ಶತಕದ ನೆರವಿನಿಂದ ಕರ್ನಾಟಕ ತಂಡ ಮುಂಬೈ ತಂಡವನ್ನು ರಣಜಿ ಟ್ರೋಫಿಯಿಂದ ಹೊರದಬ್ಬಿದ ಕರ್ನಾಟಕ ತಂಡ ಸೆಮಫೈನಲ್ ಪ್ರವೇಶಿಸಿದೆ.
ಮುಂಬೈನಲ್ಲಿ ನಡೆದ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು 377 ರನ್ ಗೆ ಆಲೌಟ್ ಮಾಡಿದ ಕರ್ನಾಟಕ ತಂಡ ಮೊದಲ ಇನಿಂಗ್ಸ್ ಮುನ್ನಡೆ ಹಿನ್ನೆಲೆಯಲ್ಲಿ ಗೆಲ್ಲಲು 325 ರನ್ ಗಳಿಸಬೇಕಾಗಿತ್ತು.
2 ವಿಕೆಟ್ ಗೆ 132 ರನ್ ಗಳಿಂದ ಕೊನೆಯ ದಿನವಾದ ಸೋಮವಾರ ಎರಡನೇ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ 6 ವಿಕೆಟ್ ಕಳೆದುಕೊಂಡು 4 ವಿಕೆಟ್ ಗಳ ಜಯಭೇರಿ ಬಾರಿಸಿತು.
ಭಾರತ ತಂಡದಲ್ಲಿ ಈಗಾಗಲೇ ಫಿನಿಷರ್ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಹೊಂದಿದ್ದ ಕೆಎಲ್ ರಾಹುಲ್ 182 ಎಸೆತಗಳಲ್ಲಿ 14 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 130 ರನ್ ಬಾರಿಸಿದರು. ರವಿಚಂದ್ರನ್ ಅಶ್ವಿನಿ ಜೊತೆ 4ನೇ ವಿಕೆಟ್ ಗೆ 147 ರನ್ ಜೊತೆಯಾಟ ನಿಭಾಯಿಸಿದರು.
ಸ್ಮರಣ್ 123 ಎಸೆತಗಳಲ್ಲಿ 11 ಬೌಂಡರಿ ಒಳಗೊಂಡ 83 ರನ್ ಬಾರಿಸಿ ಔಟಾಗದೇ ಉಳಿದರು. ವಿದ್ಯಾಧರ್ ಪಾಟೀಲ್ 30 ಎಸೆತಗಳಲ್ಲಿ 3 ಬೌಂಡರಿ ಸೇರಿದ 1 ಸಿಕ್ಸರ್ ಸಹಾಯದಿಂದ 31 ರನ್ ಗಳಿಸಿದರು.



