Thursday, June 25, 2026
Google search engine
Homeಮನರಂಜನೆಸರಿಗಮಪ Little Champs Audition: 31 ಜಿಲ್ಲೆಗಳಲ್ಲಿ ಆಡಿಷನ್ ಆರಂಭ

ಸರಿಗಮಪ Little Champs Audition: 31 ಜಿಲ್ಲೆಗಳಲ್ಲಿ ಆಡಿಷನ್ ಆರಂಭ

ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಸ ರಿ ಗ ಮ ಪ. ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಸ ರಿ ಗ ಮ ಪ’ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ.

ಈ ಬಾರಿಯ ಸ ರಿ ಗ ಮ ಪ ಮಕ್ಕಳಿಗಾಗಿ ನಡೆಯಲಿದ್ದು 3 ವರುಷದಿಂದ 15 ವರುಷದ ಒಳಗಿನ ಮಕ್ಕಳು ಈ ಆವೃತ್ತಿಯಲ್ಲಿ ಭಾಗವಹಿಸಬಹುದಾಗಿದೆ.

ಸರಿಗಮಪ Little Champs ಆಡಿಷನ್ ಗಳು ಕರ್ನಾಟಕ 31 ಜಿಲ್ಲೆಗಳಲ್ಲಿ ನಡೆಯಲಿದೆ. ಚೆನ್ನಾಗಿ ಹಾಡುವ ಮಕ್ಕಳು, 3 ರಿಂದ 15 ವರ್ಷದ ಒಳಗಿದ್ದರೆ 3 ವಿಭಿನ್ನವಾದ ಹಾಡುಗಳನ್ನು ಕಲಿತು ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಈ ಆಡಿಷನ್ ನಲ್ಲಿ ಭಾಗವಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಜಿರೋಸ್ ಕಡ್ಡಾಯ.

ಆಡಿಷನ್ ನಡೆಯುವ ಸ್ಥಳಗಳು ಮತ್ತು ದಿನಾಂಕಗಳು:

ಫೆಬ್ರವರಿ 14 ಶನಿವಾರದಂದು ಕೊಪ್ಪಳ, ಶಿವಮೊಗ್ಗ, ತುಮಕೂರು, ಫೆಬ್ರವರಿ 15 ಭಾನುವಾರದಂದು ಬಳ್ಳಾರಿ, ಉಡುಪಿ ಮತ್ತು ಬೆಂಗಳೂರು, ಫೆಬ್ರವರಿ 16 ಸೋಮವಾರದಂದು ರಾಯಚೂರು, ಮಂಗಳೂರು, ಫೆಬ್ರವರಿ 17 ಮಂಗಳವಾರದಂದು ಯಾದಗಿರಿ, ಚಿತ್ರದುರ್ಗ ಮತ್ತು ಮಡಿಕೇರಿ, ಫೆಬ್ರವರಿ 18 ಬುಧವಾರದಂದು ಚಿಕ್ಕಮಗಳೂರು, ದಾವಣಗೆರೆ, ಫೆಬ್ರವರಿ 19 ಗುರುವಾರ ಬೀದರ್, ಹಾವೇರಿ, ಫೆಬ್ರವರಿ 20 ಶುಕ್ರವಾರ ಕಲುಬುರಗಿ, ಮಂಡ್ಯ, ಶಿರಸಿ, ಫೆಬ್ರವರಿ 21 ಶನಿವಾರದಂದು ವಿಜಯಪುರ, ಬೆಳಗಾವಿ, ಹಾಸನ, ಫೆಬ್ರವರಿ 22 ಭಾನುವಾರದಂದು ಬಾಗಲಕೋಟೆ, ಮೈಸೂರು, ಹುಬ್ಬಳ್ಳಿ, ಫೆಬ್ರವರಿ 23 ಸೋಮವಾರದಂದು ಗದಗ್, ಫೆಬ್ರವರಿ 24 ಮಂಗಳವಾರ ವಿಜಯನಗರ, ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ, ಫೆಬ್ರವರಿ 25 ಬುಧವಾರದಂದು ರಾಮನಗರ ಮತ್ತು ಕೋಲಾರದಲ್ಲಿ ನಡೆಯಲಿದೆ.

ಸ್ಪರ್ದಿಗಳು ಯಾವುದೇ ಕರಾಓಕೆ ಬಳಸುವಂತಿಲ್ಲ. ಇನ್ನು ಈ ಆಡಿಷನ್ ನಲ್ಲಿ ಭಾಗವಹಿಸಲು ಜೀ಼ ಕನ್ನಡ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಹಾಡೋ ಮಕ್ಕಳ ದನಿಗೆ ಜೀ಼ ಕನ್ನಡ ವೇದಿಕೆಯ ಕೊಡುಗೆ; ಮತ್ಯಾಕೆ ತಡ, ಆಡಿಷನ್ ನಲ್ಲಿ ಭಾಗವಹಿಸಿ ಮುಂದಿನ ಸುತ್ತಿಗೆ ಆಯ್ಕೆಯಾಗಿ!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments