ಅಮೆರಿಕ ತನ್ನ ಹಿತಾಸಕ್ತಿ ಮತ್ತು ಲಾಭಕ್ಕಾಗಿ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್ ತುಂಡಿನಂತೆ ಬಳಸಿಕೊಂಡು ಬಿಸಾಕಿತು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ.
ಪಾಕಿಸ್ತಾನದ ಸಂಸತ್ ಅಧಿವೇಶನದಲ್ಲಿ ಭಾರತದಿಂದ ಲಾಭ ಪಡೆಯಲು ಅಮೆರಿಕ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್ ನಂತೆ ಬಳಸಿಕೊಂಡು ಬಿಸಾಡಿತು ಎಂದು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನ ಭಯೋತ್ಪಾದನಾ ರಾಷ್ಟ್ರವಲ್ಲ, ಆದರೆ ಈ ಹಿಂದೇ ದೇಶವನ್ನು ಆಳಿದವರು ಈ ತಪ್ಪು ಕಲ್ಪನೆ ಮೂಡುವಂತೆ ಮಾಡಿದ್ದಾರೆ. ಇದರಿಂದ ಹೊರಗೆ ಬರಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಭಾರತ ಮತ್ತು ಅಮೆರಿಕ ಒಪ್ಪಂದ ಮಾಡಿಕೊಂಡಿದ್ದು, ಭಾರತದ ಮೇಲೆ ಹೇರಿದ್ದ ಹೆಚ್ಚುವರಿ ಶೇ.25ರಷ್ಟು ತೆರಿಗೆಯನ್ನು ರದ್ದುಗೊಳಿಸಿದ್ದೂ ಅಲ್ಲದೇ ಹಲವು ಕ್ಷೇತ್ರಗಳಲ್ಲಿ ಶೂನ್ಯ ಸುಂಕ ಒಪ್ಪಂದಕ್ಕೆ ಸಹಿ ಹಾಕಿದ ಬಗ್ಗೆ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ ರಕ್ಷಣಾ ಸಚಿವ ಖ್ವಾಜಾ ಆಸೀಫ್, ಪಾಕಿಸ್ತಾನವನ್ನು ದಾಳದಂತೆ ಅಮೆರಿಕ ಬಳಸಿಕೊಂಡಿತು ಎಂದು ವಿಷಾದಿಸಿದರು.
ಆಫ್ಘಾನಿಸ್ತಾನದ ಜೊತೆ ನಡೆದ ಎರಡು ಯುದ್ಧಗಳು ಕೂಡ ಮಾಡಿದ ಪಾಕಿಸ್ತಾನ ಮಾಡಿದ ತಪ್ಪುಗಳಾಗಿವೆ. ಭಯೋತ್ಪಾದಕ ರಾಷ್ಟ್ರ ಎಂದು ಹಿಂದಿನಿಂದ ಬಂದ ತಪ್ಪು ಕಲ್ಪನೆ ಮುಂದುವರಿಯುತ್ತಿದೆ. ಇದರಿಂದ ಪಾಕಿಸ್ತಾನ ಹಲವು ವಿಷಯಗಳಲ್ಲಿ ಹಿಂದೆ ಬೀಳುವಂತೆ ಆಗಿದೆ ಎಂದು ಅವರು ವಿವರಿಸಿದರು.
1999ರಿಂದ ಅಮೆರಿಕ ಜೊತೆಗಿನ ಪಾಕಿಸ್ತಾನದ ಸಂಬಂಧ ಹಳಸುತ್ತಾ ಬಂದಿದೆ. 2001, ಸೆಪ್ಟೆಂಬರ್ ೧೧ರ ದಾಳಿಯ ನಂತರ ನಿರ್ದಿಷ್ಟವಾಗಿ ಸೌಹಾರ್ದ ಸಂಬಂಧಕ್ಕೆ ಧಕ್ಕೆ ಉಂಟಾಗಿದೆ. ಈ ಎಲ್ಲಾ ಕಾರಣಗಳಿಗಾಗಿ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್ ಗಿಂತ ಕೆಟ್ಟದಾಗಿ ಪಾಕಿಸ್ತಾನವನ್ನು ಅಮೆರಕ ನಡೆಸಿಕೊಳ್ಳಲು ಕಾರಣ ಎಂದು ಅವರು ಹೇಳಿದರು.



