ಅಮೆರಿಕದಲ್ಲಿ ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಶವ 6ನೇ ದಿನ ಪತ್ತೆಯಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಶವ ಕಾಲೇಜು ಕ್ಯಾಂಪಸ್ ಸಮೀಪದ ಟಿಲ್ಡನ್ ರೀಜಿನಲ್ ಪಾರ್ಕ್ ನ ಸರೋವರದಲ್ಲಿ ಪತ್ತೆಯಾಗಿದೆ. ಶವ ದೊರೆತ ಜಾಗದಲ್ಲಿ ಸಾಕೇತ್ ಲ್ಯಾಪ್ ಟಾಪ್, ಮೊಬೈಲ್ ಕೂಡ ಪತ್ತೆಯಾಗಿದೆ.
ಫೆಬ್ರವರಿ 9ರಂದು ನಾಪತ್ತೆಯಾಗಿದ್ದ ಸಾಕೇತ್ 5 ದಿನಗಳಾದರೂ ಪತ್ತೆಯಾಗದ ಕಾರಣ ರೂಮ್ ಮೇಟ್ ಟ್ವಿಟ್ ಮಾಡಿ ಭಾರತೀಯ ರಾಜತಾಂತ್ರಿಕ ಕಚೇರಿಯ ನೆರವು ಕೋರಿದ್ದ. ಭಾರತ ಮಧ್ಯಪ್ರವೇಶಿಸುತ್ತಿದ್ದಂತೆ ಚುರುಕಾದ ಸ್ಥಳೀಯ ಪೊಲೀಸರು ವಿಶ್ವವಿದ್ಯಾಲಯದ ಸಮೀಪದ ಕಣಿವೆ, ಬೆಟ್ಟಗುಡ್ಡ ಹಾಗೂ ನದಿ, ಸರೋವರಗಳ ಬಳಿ ಹುಡುಕಾಟ ನಡೆಸಿದ್ದರು.
ಸಾಕೇತ್ ಶ್ರೀನಿವಾಸಯ್ಯ ಬೆಂಗಳೂರಿನ ನಾಗರಬಾವಿ ನಿವಾಸಿಯಾಗಿದ್ದು, ಎಂಎಸ್ ವಿಭಾಗದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಪದವಿ ಪಡೆಯಲು ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದರು.



