ಬೆಂಗಳೂರು: ಮದ್ಯಪಾನ ಮಾಡಲು ಅಡ್ಡಿಪಡಿಸಿದ ಅಜ್ಜಿಯನ್ನು ಮಗಳು ಹಾಗೂ ಮೊಮ್ಮಗ ಇಬ್ಬರು ಸೇರಿ ಬ್ಯಾಟ್ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ ಕೆಂಗೇರಿಯ ಸುಭಾಷ್ ನಗರದ ಅಪಾರ್ಟ್‌ಮೆಂಟ್ ನಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಹಣ್ಣಿನಕೆರೆಯ ಜಯಮ್ಮ (70) ಅವರನ್ನು ಮಗಳು ಭಾಗ್ಯಲಕ್ಷ್ಮಿ(41) ಹಾಗೂ ಮೊಮ್ಮಗ ಕುಶಾಲ್ (26) ಕೊಲೆ ಮಾಡಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಅನಿತಾ ಹದ್ದಣ್ಣನವರ ತಿಳಿಸಿದ್ದಾರೆ.
ಕೆಂಗೇರಿಯ ಸುಭಾಷ್ ನಗರದ ಮೋನಿಷಾ ಎಂಕ್ಲೇವ್ ನಲ್ಲಿ ಅಪಾರ್ಟ್ಮೆಂಟ್ ಒಂದನೇ ಮಹಡಿಯ ಫ್ಲಾಟ್ ಆರೋಪಿಗಳಾದ ಭಾಗ್ಯಲಕ್ಷ್ಮಿ ಅವರ ಮಗ ಕುಶಾಲ್ ವಾಸವಿದ್ದರು.
ಅವರ ಮನೆಗೆ ಆಗಾಗ ಭಾಗ್ಯಲಕ್ಷ್ಮಿರವರ ತಾಯಿ ಜಯಮ್ಮ ಬಂದು ಹೋಗುತ್ತಿದ್ದರು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಭಾಗ್ಯಲಕ್ಷ್ಮಿ ಮತ್ತು ಅವರ ಮಗ ಕುಶಾಲ್ ರವರು ಕುಡಿದು ಗಲಾಟೆ ಮಾಡುತ್ತಿದ್ದರು.
ಈ ಬಗ್ಗೆ ಅಪಾರ್ಟ್ ಮೆಂಟ್ ಇತರೆ ವಾಸಿಗಳಿಗೆ ತೊಂದರೆಯಾಗುತ್ತಿದ್ದರಿಂದ ಅವರ ತಂದೆ ಕೃಷ್ಣನಾಯ್ಕ್ ರನ್ನು ಕರೆಸಿ ಅಪಾರ್ಟ್ಮೆಂಟ್ ಅವರೆಲ್ಲ ಸೇರಿ ಕುಶಾಲ್ ನನ್ನು ರಿಯಾಬ್ ಗೆ ಕಳಿಸಲಾಗಿತ್ತು.
ಕಳೆದ ಕೆಲವು ವಾರಗಳಿಂದ ಮತ್ತೆ ಕುಶಾಲ್ ಮನೆಗೆ ಬಂದಿದ್ದು, ಆಗಿನಿಂದ ಮತ್ತೆ ತಾಯಿ ಮಗ ಇಬ್ಬರೂ ಕುಡಿದು ಗಲಾಟೆ ಮಾಡುತ್ತಿದ್ದರು.ಇತ್ತೀಚಿಗೆ ಅವರ ಮನೆಗೆ ಅವರ ಅಜ್ಜಿ ಬಂದಿದ್ದು, ಮೂರ್ನಾಲ್ಕು ದಿನಗಳಿಂದ ಅವರ ಫ್ಲಾಟ್ ನಿಂದ ಹೆಚ್ಚು ಗಲಾಟೆ ಶಬ್ದ ಕೇಳಿ ಬರುತ್ತಿತ್ತು.
ನಿನ್ನೆ ದಿನ ಮಧ್ಯ ರಾತ್ರಿ ಅವರ ಮನೆಯಿಂದ ಹೆಚ್ಚು ಗಲಾಟೆ ಶಬ್ದ ಕೇಳುತ್ತಿದ್ದ ಅಜ್ಜಿ ಜಯಮ್ಮ ಜೋರಾಗಿ ಕಿರುಚಾಡುತ್ತಿದ್ದರು.
ಅದೇ ಅಪಾರ್ಟ್ಮೆಂಟ್ ನ ಮತ್ತೊಂದು ಫ್ಲಾಟ್ ನ ವಾಸಿ ಧನಂಜಯ ಅವರು ಹೋಗಿ ನೋಡಿದಾಗ ಕುಶಾಲ್ ನ ಚಿಕ್ಕಪ್ಪ ಸ್ವಾಮಿ ನಾಯ್ಕ್, ಮತ್ತು ಅಪಾರ್ಟ್ಮೆಂಟ್ ನವರು ನಿಂತಿದ್ದು, ನಾನು ಏನಾಯಿತೆಂದು ಹೋಗಿ ನೋಡಲಾಗಿ ಆ ಮನೆಯಲ್ಲಿ ಭಾಗ್ಯಲಕ್ಷ್ಮಿ ರವರ ತಾಯಿ ಜಯಮ್ಮ ರವರು ಹಾಲ್ ನ ಬಾತ್ರೂಮ್ ಬಳಿ ಬಿದ್ದಿದ್ದರು.
ಅಲ್ಲಿದ್ದವರಿಗೆ ಏನಾಯ್ತು ಎಂದು ಕೇಳಿದ್ದಕ್ಕೆ ಕುಶಾಲ್ ಮತ್ತು ಭಾಗ್ಯಲಕ್ಷ್ಮಿ ಇಬ್ಬರೂ ಸೇರಿ ಜಯಮ್ಮ ಅಜ್ಜಿಯನ್ನು ಕುಡಿಯಲು ಅಡ್ಡಿ ಮಾಡುತ್ತಿದ್ದಕ್ಕೆ ಬೆಳಿಗ್ಗೆ 5 ರಿಂದ 8 ಗಂಟೆ ಮಧ್ಯದಲ್ಲಿ ಬ್ಯಾಟ್ ಮತ್ತು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದು ಕಂಡುಬಂದಿದೆ.
ಕೆಂಗೇರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.



