Wednesday, July 1, 2026
Google search engine
Homeವಾಣಿಜ್ಯಐಇಎಸ್‌ಎ ವಿಷನ್ ಶೃಂಗಸಭೆ 2026 ಬೆಂಗಳೂರಿನಲ್ಲಿ ಉದ್ಘಾಟನೆ

ಐಇಎಸ್‌ಎ ವಿಷನ್ ಶೃಂಗಸಭೆ 2026 ಬೆಂಗಳೂರಿನಲ್ಲಿ ಉದ್ಘಾಟನೆ

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನ್ಯುಫ್ಯಾಕ್ಚರಿಂಗ್ (ಇ ಎಸ್ ಡಿ ಎಂ) ವಲಯದ ದೇಶದ ಪ್ರಮುಖ ಕೈಗಾರಿಕಾ ಸಂಸ್ಥೆಯಾದ ಇಂಡಿಯಾ ಎಲೆಕ್ಟ್ರಾನಿಕ್ಸ್ & ಸೆಮಿಕಂಡಕ್ಟರ್ ಅಸೋಸಿಯೇಷನ್ ಬೆಂಗಳೂರಿನ ಲೀಲಾ ಭಾರತೀಯ ಸಿಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಐಇಎಸ್‌ಎ ವಿಷನ್ ಶೃಂಗಸಭೆ 2026  ಉದ್ಘಾಟಿಸಿತು.

“ವಿನ್ಯಾಸದಿಂದ ಉತ್ಪಾದನೆ: ಉತ್ಪನ್ನ, ಉತ್ಪಾದನೆ ಮತ್ತು ಕೌಶಲ್ಯದ ಸಂಯೋಜನೆ” ಎಂಬ ವಿಷಯದ ಮೇಲೆ ಕೈಗಾರಿಕೆ, ಸರ್ಕಾರ ಮತ್ತು ಶೈಕ್ಷಣಿಕ ಕ್ಷೇತ್ರದಿಂದ ಬಂದಿರುವ ದಿಗ್ಗಜರನ್ನು ಒಟ್ಟುಗೂಡಿಸುವ ಎರಡು ದಿನಗಳ ಶೃಂಗಸಭೆ ಭಾರತವನ್ನು ಉತ್ಪನ್ನ ರಾಷ್ಟ್ರವಾಗುವ ಮಹತ್ವಾಕಾಂಕ್ಷೆಯಲ್ಲಿ ನಿರ್ಣಾಯಕ ಬದಲಾವಣೆಯನ್ನು ಸೂಚಿಸಿತು.

ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ನಾಯಕರು, ಉದ್ಯಮದ ದಿಗ್ಗಜರು ಮತ್ತು ಗಣ್ಯರು, ಅಮಿತೇಶ್ ಕುಮಾರ್ ಸಿನ್ಹಾ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ ಸೆಮಿಕಂಡಕ್ಟರ್ ಮಿಷನ್ ಮತ್ತು ಹೆಚ್ಚುವರಿ ಕಾರ್ಯದರ್ಶಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ), ಮನೀಶ್ ಚಡ್ಡಾ (ಜಂಟಿ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಭಾರತ ಸರ್ಕಾರ), ಡಾ. ಎಂ ಎಂ ತ್ರಿಪಾಠಿ (ಮಹಾನಿರ್ದೇಶಕರು, ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ), ರಾಹುಲ್ ಶರಣಪ್ಪ (ಭಾ ಆ ಸೇ, ನಿರ್ದೇಶಕರು, ಐಟಿಬಿಟಿ ವಿಭಾಗ, ಕರ್ನಾಟಕ ಸರ್ಕಾರ), ನೆದರ್ಲ್ಯಾಂಡ್ಸ್ ರಾಯಭಾರ ಕಚೇರಿಯ ಕಾನ್ಸುಲ್ ಜನರಲ್ ಇವೌಟ್ ಡಿ ವಿಟ್, ಎಸ್ ಇ ಎಂ ಐ ಅಧ್ಯಕ್ಷ ಅಜಿತ್ ಮನೋಚಾ, ಗಿಲ್ರಾಯ್ ಮ್ಯಾಥ್ಯೂ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಯು ಎಸ್ ಟಿ), ಐಇಎಸ್ ಎ ಅಧ್ಯಕ್ಷ ಅಶೋಕ್ ಚಂದಕ್, ಐಇಎಸ್ ಎ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ಮತ್ತು ರಾಷ್ಟ್ರೀಯ ವ್ಯವಸ್ಥಾಪಕ ಸೀಮೆನ್ಸ್ ಇ ಡಿ ಎ ಶ್ರೀ ರುಚಿರ್ ದೀಕ್ಷಿತ್, ಐ ಡಿ ಎಸ್ ಪಿ ಎಸ್ ಮತ್ತು ಎಮಿರೆಟಸ್ ಜಾರ್ಜಿಯಾ ಭಾರತ ಸೆಮಿಕಂಡಕ್ಟರ್ ಅಭಿಯಾನದ ಟೆಕ್ ಸಲಹೆಗಾರರಾದ ಪ್ರೊಫೆಸರ್ ತುಮ್ಮಲ ರಾವ್ ಸೇರಿದಂತೆ ಹಲವಾರು ಗಣ್ಯರು ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments