Tuesday, May 19, 2026
Google search engine
Homeಬೆಂಗಳೂರು22 ಗಂಟೆ ವಿಮಾನದಲ್ಲಿ ಕಾದು ಬೇಸತ್ತ ಪ್ರಯಾಣಿಕರಿಂದ ಪ್ರತಿಭಟನೆ: ನೇಪಾಳ ಪ್ರವಾಸ ರದ್ದು

22 ಗಂಟೆ ವಿಮಾನದಲ್ಲಿ ಕಾದು ಬೇಸತ್ತ ಪ್ರಯಾಣಿಕರಿಂದ ಪ್ರತಿಭಟನೆ: ನೇಪಾಳ ಪ್ರವಾಸ ರದ್ದು

ನೇಪಾಳ ಮೂಲದ ಏರ್‌ ಇಂಡಿಯಾ ಎಕ್ಸ್‌ ಪ್ರೆಸ್‌ 22 ಗಂಟೆಯಾದರೂ ಹಾರಾಡದ ಕಾರಣ ವಿಮಾನದಲ್ಲಿ ಕಾದು ಬೇಸತ್ತ ಪ್ರವಾಸಿಗರು ನೇಪಾಳ ಪ್ರವಾಸ ರದ್ದುಗೊಳಿಸಿದ ಘಟನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕರ್ನಾಟಕದ ಸುಮಾರು ಪ್ರವಾಸಿಗರ ತಂಡ 10 ದಿನಗಳ ನೇಪಾಳ ಪ್ರವಾಸ ಕೈಗೊಂಡಿದ್ದರು. ಆದರೆ ಏರ್‌ ಇಂಡಿಯಾ ವಿಮಾನ 22 ಗಂಟೆಗಳ ಕಾಲ ಹಾರಾಟ ನಡೆಸದೇ ನಿಂತಿತ್ತು. ಕಾದು ಕಾದು ಬೇಸತ್ತ ಪ್ರಯಾಣಿಕರು ಕಂಪನಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದೂ ಅಲ್ಲದೇ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.

ಈ ಘಟನೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್‌ -2ರಲ್ಲಿ ಶನಿವಾರ ನಡೆದಿದ್ದು, ಸಂಪರ್ಕ ಕೊರತೆಯಿಂದ ಈ ಗೊಂದಲ ಉಂಟಾಗಿದೆ. ವಿಮಾನದ ಹಾರಾಟ ಸಮಯ ಬದಲಾಗಿದ್ದು, ಈ ವಿಷಯ ಪ್ರಯಾಣಿಕರಿಗೆ ಗಮನಕ್ಕೆ ತಾರದ ಕಾರಣ ಗೊಂದಲ ಉಂಟಾಗಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತು.

ಗುರುವಾರ ಬೆಳಿಗ್ಗೆ 10.30ಕ್ಕೆ ವಿಮಾನ ಕಠ್ಮಂಡುಗೆ ಹೊರಟಿತು. ಆದರೆ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದ ವಿಮಾನ ಕಠ್ಮಂಡುವಿನಲ್ಲಿ ಇಳಿಯದೇ ವಾಪಸ್‌ ಬೆಂಗಳೂರಿಗೆ ಬಂದಿಳಿತ್ತು. ಆದರೆ ಮತ್ತೊಮ್ಮೆ ಬೆಂಗಳೂರಿನಿಂದ ಹೊರಟ ವಿಮಾನ ಮತ್ತೆ ಕಠ್ಮಂಡುವಿನಲ್ಲಿ ಇಳಿಯಲಿಲ್ಲ. ಬೆಂಗಳೂರಿಗೂ ಬಾರದೇ ಲಕ್ನೋದಲ್ಲಿ ಇಳಿಯಿತು.

ವಿಮಾನ ಸಂಸ್ಥೆಯ ಈ ಅವ್ಯವಸ್ಥೆಯಿಂದ ನೇಪಾಳ ಪ್ರವಾಸಕ್ಕೆ ಹೊರಟ್ಟಿದ್ದ ಕರ್ನಾಟಕದ ಪ್ರವಾಸಿಗರು ಕೆರಳಿದ್ದು, ಈ ಗೊಂದಲಗಳ ಬಗ್ಗೆ ಮಾಹಿತಿ ನೀಡದೇ ವಂಚಿಸಿದೆ ಎಂದು ಆರೋಪಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments