Tuesday, June 30, 2026
Google search engine
Homeವಿದೇಶ9/11 ಮಾದರಿ ದಾಳಿ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

9/11 ಮಾದರಿ ದಾಳಿ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಟೆಹರಾನ್: ಯುದ್ಧವನ್ನು ಕೆಲವೇ ವಾರಗಳಲ್ಲಿ ಮುಗಿಸುತ್ತೇವೆ ಎಂದು ಅಮೆರಿಕ ಹೇಳಿಕೆ ಬೆನ್ನಲ್ಲೇ 9/11 ಮಾದರಿ ದಾಳಿ ಎದುರಿಸಲು ಸಜ್ಜಾಗಿ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಣ ಯುದ್ಧ ಮೂರನೇ ವಾರಕ್ಕೆ ಕಾಲಿಡುತ್ತಿದ್ದು, ಈ ವಾರದಿಂದ ಭೀಕರ ದಾಳಿ ನಡೆಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದ್ದು, ಈಗಾಗಲೇ ಬಹುತೇಕ ಶಕ್ತಿ ಕಳೆದುಕೊಂಡಿರುವ ಇರಾನ್ ಮೇಲಿನ ಯುದ್ಧವನ್ನು ಕೆಲವೇ ವಾರಗಳಲ್ಲಿ ಮುಗಿಸುತ್ತೇವೆ ಎಂದು ವಾಷಿಂಗ್ಟನ್ ಹೇಳಿಕೆ ನೀಡಿದೆ.

ಇದೇ ವೇಳೆ ಇಸ್ರೇಲ್ ಇರಾನ್ ನ ಡ್ರೋಣ್ ದಾಸ್ತಾನು ಅಡಗುತಾಣಗಳ ಮೇಲೆ ದಾಳಿ ನಡೆಸುತ್ತಿದ್ದು, ಅಪಾರ ಹಾನಿ ಉಂಟು ಮಾಡಿದೆ ಎಂದು ಹೇಳಿದೆ. ಅಮೆರಿಕ ಕೂಡ ಏಕಕಾಲದಲ್ಲಿ ಟೆಹ್ರಾನ್ ಮೇಲೆ 20ಕ್ಕೂ ಅಧಿಕ ಭಾರೀ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿದೆ.

ಇರಾನ್ ನ ಅತ್ಯಧಿಕ ತೈಲ ಉತ್ಪಾದನಾ ಜಾಗವಾದ ಖಾರಾ ದ್ವೀಪದ ನಂತರ ಟೆಹ್ರಾನ್ ಹಾಗೂ ರಮತ್ ಗ್ಯಾನ್ ನಗರದ ಮೇಲೆ ಅಮೆರಿಕ ದಾಳಿ ಮಾಡಿದೆ. ದಾಳಿಯ ವೀಡಿಯೋಗಳನ್ನು ಕೂಡ ಬಿಡುಗಡೆ ಮಾಡಿದೆ.

ಇದೇ ವೇಳೆ ಇರಾನ್ ದುಬೈ, ಕುವೈತ್ ಮುಂತಾದ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಅಮೆರಿಕ- ಇಸ್ರೇಲ್ ದಾಳಿಯಲ್ಲಿ ಮಜ್ತಬಾ ಖಮೇನಿ ಸಾವಿಗೀಡಾಗಿದ್ದಾರೆ ಎಂಬ ವದರಿಯನ್ನು ನಿರಾಕರಿಸಿರುವ ಇರಾನ್, ಮುಂದಿನ ದಿನಗಳಲ್ಲಿ 9/11 ಮಾದರಿಯಲ್ಲಿ ಅಮೆರಿಕದ ಮೇಲೆ ದಾಳಿ ಮಾಡಲು ಸಿದ್ಧತೆ ಆರಂಭಿಸಿದೆ ಎಂದು ಹೇಳಿದೆ.

ಭಾರತದತ್ತ ಮತ್ತೊಂದು ತೈಲ ಹಡಗು!

ಯುಎಇಯ ಫುಜೈರಾದಿಂದ ತೈಲ ಹೊತ್ತು ಬರುತ್ತಿದ್ದ ಭಾರತದ ತ್ರಿವರ್ಣ ಧ್ವಜ ಹೊಂದಿದ ಹಡಗು ಸುರಕ್ಷಿತವಾಗಿ ಭಾರತದ ಕಡೆ ಆಗಮಿಸುತ್ತಿದೆ.

ಎರಡು ತೈಲ ಹಡಗು ನಂತರ ಎರಡು ಎಲ್ ಪಿಜಿ ಹಡುಗಗಳನ್ನು ಹರ್ಮುಜ್ ಜಲಸಂಧಿಯಿಂದ ಬಿಡುಗಡೆ ಮಾಡಿದ್ದ ಇರಾನ್ ಇದೀಗ ಜಗ್ ಲಡ್ಕಿ’ ಹೆಸರಿನ ಮತ್ತೊಂದು ಕಚ್ಚಾ ತೈಲ ಹಡಗನ್ನು ಬಿಡುಗಡೆ ಮಾಡಿದೆ.
80,800 ಟನ್ ಕಚ್ಚಾ ತೈಲ ಹೊತ್ತ ಹಡಗು ಯುದ್ಧ ನಡೆಯುತ್ತಿರುವ ಪ್ರದೇಶದಿಂದ ಸುರಕ್ಷಿತವಾಗಿ ಹೊರಗೆ ಬಂದಿದ್ದು, ಭಾರತದತ್ತ ಸಾಗುತ್ತಿದೆ. ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments