ಬೀದಿ ನಾಯಿಗಳ ಹಿಂಡು ದಾಳಿ ಮಾಡಿ 15 ಜಿಂಕೆಗಳನ್ನು ಕೊಂದ ಆಘಾತಕಾರಿ ಘಟನೆ ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ನಡೆದಿದೆ.
ಪ್ರಾಣಿ ರಕ್ಷಣಾ ಕೇಂದ್ರದ ಆವರಣದೊಳಗೆ ನುಗ್ಗಿದ ಬೀದಿ ನಾಯಿಗಳ ಹಿಂಡು 15 ಜಿಂಕೆಗಳನ್ನು ಕೊಂದಿವೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಮಧ್ಯರಾತ್ರಿ ಅಂಬಿಕಾಪುರದ ಸಂಜಯ್ ವ್ಯಾನ್ ವಾಟಿಕಾದಲ್ಲಿ ನಡೆದ ದುರ್ಘಟನೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ಅರಣ್ಯ ಇಲಾಖೆಯು ಉಪ ರೇಂಜರ್ ಮತ್ತು ಮೂವರು ಅರಣ್ಯ ಸಿಬ್ಬಂದಿ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ನಾಲ್ಕರಿಂದ ಐದು ಬೀದಿ ನಾಯಿಗಳ ಹಿಂಡು ಪಕ್ಕದ ಕಾಡಿನಿಂದ ಉದ್ಯಾನವನಕ್ಕೆ ಪ್ರವೇಶಿಸಿ ಜಿಂಕೆ ಆವರಣವನ್ನು ಭೇದಿಸಿದೆ ಎಂದು ಸುರ್ಗುಜಾ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಅಭಿಷೇಕ್ ಜೋಗಾವತ್ ಹೇಳಿದ್ದಾರೆ.



