ನವದೆಹಲಿ: ಕೊಲಂಬಿಯಾದ ಸರಕು ಸಾಗಾಣೆ ವಿಮಾನ ಪತನಗೊಂಡ ಪರಿಣಾಮ 2 ಸೇನಾ ತುಕಡಿಗಳ 80 ಯೋಧರು ಮೃತಪಟ್ಟ ದಾರಣ ಘಟನೆ ಕೊಲಂಬಿಯಾದಲ್ಲಿ ಸಂಭವಿಸಿದೆ.
ಸಿ-130 ಹರ್ಕೂಲಸ್ ವಿಮಾನ ಸಾಮಾನ್ಯವಾಗಿ ಸರಕು ಸಾಗಾಟಕ್ಕೆ ಬಳಸಲಾಗುತ್ತದೆ. ಈ ವಿಮಾನ ಪ್ಯೂಟ್ರೊ ಲೆಗ್ಯೂಜುಮೊ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಈಕ್ವೆಡಾರ್ ಗಡಿಯಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ವಿಮಾನದಲ್ಲಿ 100 ಯೋಧರು ಇದ್ದರು ಎಂದು ಹೇಳಲಾಗಿದ್ದು, ವಿಮಾನ ಪತನಗೊಂಡ ಬೆನ್ನಲ್ಲೇ ಸ್ಫೋಟಗೊಂಡಿದ್ದು, ಅರೆ ಕಾಡಿನ ಮಧ್ಯೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯಗಳು ಲಭ್ಯವಾಗಿದೆ.
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ರಕ್ಷಣಾ ಇಲಾಖೆ ಹಾಗೂ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದು, ಮೃತಪಟ್ಟರ ವಿವರ ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



