ದೆಹಲಿ: ಲೆಕ್ಸಸ್ ಇಂಡಿಯಾ ಇಂದು ಹೊಚ್ಚಹೊಸ ಇ.ಎಸ್.500ಸಿ ಭಾರತದಲ್ಲಿ ಬಿಡುಗಡೆ ಮಾಡಿದ್ದು ಇದು ಬ್ರಾಂಡ್ ನ ವಿದ್ಯುದೀಕರಣದ ಪ್ರಯಾಣದಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದ್ದು ಲೆಕ್ಸಸ್ ನ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನ (ಬಿ.ಇ.ವಿ.)ವನ್ನು ಭಾರತೀಯ ಮಾರುಕಟ್ಟೆಗೆ ತಂದಿದೆ.
ಜಪಾನ್ ಮೊಬಿಲಿಟಿ ಶೋ 2025ರಲ್ಲಿ ಪ್ರಕಟಿಸಲಾದ “ಡಿಸ್ಕವರ್” ಲೆಕ್ಸಸ್ ನ ಬ್ರಾಂಡ್ ತತ್ವಗಳನ್ನು ಕೇಂದ್ರದಲ್ಲಿ ಹೊಂದಿದೆ. ಉತ್ತಮ ಉತ್ಪನ್ನಗಳು, ಉತ್ಪನ್ನ ಸೇವೆಗಳು ಮತ್ತು ಉತ್ತಮ ಅನುಭವಗಳನ್ನು ಅನ್ವೇಷಿಸುವ ಧ್ಯೇಯದಲ್ಲಿದೆ ಮತ್ತು ಅವರ ಜೀವನಶೈಲಿಗಳಿಗೆ ಹೊಸ ಮೌಲ್ಯ ಕಂಡುಕೊಳ್ಳಲು ಅತಿಥಿಗಳಿಗೆ ನೆರವಾಗುತ್ತದೆ.
1989ರಲ್ಲಿ ಮುಂಚೂಣಿಯ ಎಲ್.ಎಸ್. ಜೊತೆಯಲ್ಲಿ ಬಿಡುಗಡೆ ಮಾಡಿದ ಇ.ಎಸ್. ಲೆಕ್ಸಸ್ ನಲ್ಲಿ ಕೇಂದ್ರ ಮಾದರಿಯಾಗಿದ್ದು ತನ್ನ ನಿಶ್ಯಬ್ದತೆ, ರೈಡ್ ಕಂಫರ್ಟ್ ಮತ್ತು ವಿಶಾಲ ಒಳಾಂಗಣಕ್ಕೆ ಜಾಗತಿಕ ಪ್ರಶಂಸೆ ಪಡೆದಿದೆ. ಈ ಮಾದರಿಯು ವಿಶ್ವದಾದ್ಯಂತ 80ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿದೆ. 2005ರಲ್ಲಿ ಆರ್.ಎಕ್ಸ್.400ಎಚ್ ಬಿಡುಗಡೆಯಾದ ದಿನದಿಂದಲೂ ಚಲನಶೀಲ ಕಾರ್ಯಕ್ಷಮತೆ ಮತ್ತು ಪಾರಿಸರಿಕ ಜವಾಬ್ದಾರಿಯ ಅನ್ವೇಷಣೆಯಲ್ಲಿ ಸತತ ವಿದ್ಯುದೀಕರಣ ಮಾರ್ಗದಲ್ಲಿದೆ.
ಎಚ್.ಇ.ವಿ.ಗಳು, ಪಿ.ಎಚ್.ಇ.ವಿಗಳು ಮತ್ತು ಬಿ.ಇ.ವಿ.ಗಳಿಗೆ ಸತತ ಆದ್ಯತೆ ನೀಡುವ ಮೂಲಕ ಲೆಕ್ಸಸ್ ಇಂಗಾಲದ ತಟಸ್ಥ ಸಮಾಜ ರೂಪಿಸಲು ಶ್ರಮಿಸುತ್ತಿದ್ದು ಅತಿಥಿಗಳು ಮತ್ತು ಮಾರುಕಟ್ಟೆಗಳ ವಿಸ್ತಾರ ಅಗತ್ಯಗಳಿಗೆ ಪ್ರತಿಕ್ರಿಯೆ ನೀಡುತ್ತಿದೆ. ಲೆಕ್ಸಸ್ ವಿದ್ಯುದೀಕರಣದ ಮೂಲಕ ತನ್ನ ಕೇಂದ್ರ ವಾಹನದ ಕಾರ್ಯಕ್ಷಮತೆ ಸುಧಾರಿಸುವ ಮೂಲಕ ವಿಶಿಷ್ಟ ಬ್ರಾಂಡ್ ಅನುಭವ ನೀಡಲು ಬದ್ಧವಾಗಿದೆ. ಈ ಚಳವಳಿಯು ಭವಿಷ್ಯದ ಚಲನೆಯನ್ನು ಮರು ವ್ಯಾಖ್ಯಾನಿಸುವ ಆಧುನಿಕ ಜೀವನಶೈಲಿಯನ್ನು ಸಮೃದ್ಧಗೊಳಿಸುವ ಸೇವೆಗಳಿಗೆ ಆದ್ಯತೆ ನೀಡುತ್ತದೆ.
ಲೆಕ್ಸಸ್ ನ ಬಹುಮಾರ್ಗದ ವಿಧಾನದಿಂದ ಮಾರ್ಗದರ್ಶಿತವಾದ ಆಲ್-ನ್ಯೂ ಇ.ಎಸ್. ಅನ್ನು ಎಕ್ಸ್ಪೀರಿಯೆನ್ಸ್ ಎಲಿಗೆನ್ಸ್ ಮತ್ತು ಎಲೆಕ್ಟ್ರಿಫೈಡ್ ಸೆಡಾನ್ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಲಾಗಿದ್ದು ಈ ಮಾದರಿಯು ಪರಿಷ್ಕೃತ ಚಾಲನೆಯ ಅನುಭವ, ಮತ್ತಷ್ಟು ಉನ್ನತೀಕರಿಸಿದ ನಿಶ್ಯಬ್ದತೆ ಮತ್ತು ರೈಡ್ ಕಂಫರ್ಟ್ ನೀಡುವುದಲ್ಲದೆ ಅತಿಥಿಗಳ ಅಗತ್ಯಗಳಿಗೆ ಪೂರಕವಾಗಿರುತ್ತದೆ. ಇಂಗಾಲದ ತಟಸ್ಥತೆಯ ಮಾರ್ಗದ ಅನ್ವೇಷಣೆಯಲ್ಲಿ ಬಿ.ಇ.ವಿ. ಮತ್ತು ಎಚ್.ಇ.ವಿ. ಎರಡನ್ನು ಚಲನೆಯ ಬೇಡಿಕೆಗಳ ವಿಸ್ತಾರ ಅಗತ್ಯಗಳನ್ನು ಪೂರೈಸಲು ಒದಗಿಸಲಾಗುತ್ತಿದೆ. ಇಂದು ಇ.ಎಸ್.ಬಿ.ಇ.ವಿ.ಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಮತ್ತು ಇ.ಎಸ್.ಎಚ್.ಇ.ವಿ. ವಿವರಗಳನ್ನು ಈ ವರ್ಷದ ನಂತರದಲ್ಲಿ ಸೂಕ್ತ ಕಾಲದಲ್ಲಿ ಪ್ರಕಟಿಸಲಾಗುತ್ತದೆ.
ಈ ಬಿಡುಗಡೆಯ ಸಂದರ್ಭದಲ್ಲಿ ಉಪಸ್ಥಿತರಿದ್ದು ಲೆಕ್ಸಸ್ ಇಂಟರ್ನ್ಯಾಷನಲ್ ಚೀಫ್ ಎಂಜಿನಿಯರ್ ಕೊಹೀ ಚೈಶಿ, “ಇ.ಎಸ್. ದೀರ್ಘಕಾಲದಿಂದ ಭಾರತೀಯ ಮಾರುಕಟ್ಟೆಯಲ್ಲಿ ಲೆಕ್ಸಸ್ ಶ್ರೇಣಿಯ ಅತ್ಯಂತ ಜನಪ್ರಿಯ ಮಾಡೆಲ್ ಗಳಲ್ಲಿ ಒಂದಾಗಿದೆ ಮತ್ತು ನಾವು ಇಂದು ಆಲ್-ನ್ಯೂ ಇ.ಎಸ್.500ಇ ಬಿಡುಗಡೆ ಮಾಡಲು ಬಹಳ ಸಂತೋಷ ಹೊಂದಿದ್ದೇವೆ. ಈ ಫೀಚರ್ ಸನ್ನದ್ಧ ವಾಹನವನ್ನು ಚಾಲನೆಯ ಕಾರ್ಯಕ್ಷಮತೆ, ಸೌಖ್ಯ ಮತ್ತು ಸುರಕ್ಷತೆಗೆ ಗೌರವ ನೀಡುವ ಹೊಸ ಇ.ಎಸ್. ಕುಟುಂಬದ ಭಾಗವಾಗಲು ಬಯಸುವ ಅತಿಥಿಗಳಿಗೆ ವಿನ್ಯಾಸಗೊಳಿಸಲಾಗಿದೆ. ಈ ಸೆಡಾನ್ ಉನ್ನತ ಬಾಡಿ ರಿಜಿಡಿಟಿ ಮತ್ತು ಕಡಿಮೆ ಗುರುತ್ವಾಕರ್ಷಣೆಯಂತಹ ಪ್ರಮುಖ ಅನುಕೂಲಗಳನ್ನು ಹಪಂದಿದ್ದು ಅಸಾಧಾರಣ ರೈಡ್ ಕಂಫರ್ಟ್, ಸ್ಥಿರತೆಯ ನಿರ್ವಹಣೆ ಮತ್ತು ನಿಶ್ಯಬ್ದತೆ ನೀಡುತ್ತದೆ.
ಫ್ಲೋಯಿಂಗ್ ಸಿಲ್ಹೌಟ್ ಮತ್ತು ವಿಶಾಲ ಒಳಾಂಗಣವನ್ನು ಆಲೋಚನಾಯುಕ್ತ ವಿನ್ಯಾಸ ಮತ್ತು ಸುಧಾರಿತ ಆವಿಷ್ಕಾರದ ಮೂಲಕ ಸಾಧಿಸಲಾಗಿದ್ದು ಹೊಸ ಇ.ಎಸ್. ಸೆಡಾನ್ ಅನುಭವವನ್ನು ಮತ್ತಷ್ಟು ಎತ್ತರಿಸುತ್ತದೆ. ಹೊಸದಾಗಿ ಅಭಿವೃದ್ಧಿಪಡಿಸಲಾದ ಟಿ.ಎನ್.ಜಿ.ಎ ಜಿ.ಎ.-ಕೆ ಪ್ಲಾಟ್ ಫಾರಂನಲ್ಲಿ ನಿರ್ಮಿಸಲಾದ ಈ ಮಾದರಿಯು ಲೆಕ್ಸಸ್ ನ ವಿದ್ಯುದೀಕರಿಸಿದ ವಾಹನದ ಆಯ್ಕೆಗಳನ್ನು ವಿಸ್ತರಿಸುವುದೇ ಅಲ್ಲದೆ ಇಂಗಾಲದ ಹೊರಹೊಮ್ಮುವಿಕೆ ಕಡಿಮೆ ಮಾಡುತ್ತದೆ, ಅಲ್ಲದೆ ತಾಜಾ ಮತ್ತು ಸರಿಸಾಟಿ ಇರದ ಸೆಡಾನ್ ಅನುಭವ ನೀಡುತ್ತದೆ” ಎಂದರು.
ಮುಖ್ಯಾಂಶಗಳು
ಬಹು ಮಾರ್ಗಗಳ ವಿಧಾನದ ಮೂಲಕ ಇಂಗಾಲದ ತಟಸ್ಥತೆಯ ಅನ್ವೇಷಣೆಯಲ್ಲಿ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿ.ಇ.ವಿ.) ಮತ್ತು ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಚ್.ಇ.ವಿ.) ಎರಡನ್ನೂ ಚಲನೆಯ ವಿಸ್ತಾರ ಶ್ರೇಣಿಯ ಅಗತ್ಯ ಪೂರೈಸಲು ಒದಗಿಸಲಾಗುತ್ತಿದೆ.
ಲೆಕ್ಸಸ್ ಹೊಸ ವಿನ್ಯಾಸದ ಭಾಷೆಯನ್ನು ಪ್ರದರ್ಶಿಸುತ್ತಿದ್ದು ಮುಂದಿನ ತಲೆಮಾರಿನ ಬಿಇವಿ ಪರಿಕಲ್ಪನೆ ಎಲ್.ಎಫ್.-ಝಡ್.ಸಿ.ಯಿಂದ ಸ್ಪೂರ್ತಿ ಪಡೆದಿದೆ.
ತನ್ನ ಕೇಂದ್ರದಿಂದಲೇ ಪರಿಷ್ಕರಿಸಲ್ಪಟ್ಟಿದ್ದು ಹೊಸ ಮಟ್ಟಗಳ ನಿಶ್ಯಬ್ದತೆ ಮತ್ತು ಸುಧಾರಿತ ವಿದ್ಯುದೀಕರಣದಿಂದ ರೈಡ್ ಕಂಫರ್ಟ್
ವಿಶಾಲವಾದ ರಿಯರ್-ಸೀಟ್ ಪ್ಯಾಕೇಜ್ ಹೊಚ್ಚಹೊಸ ತಂತ್ರಜ್ಞಾನದೊಂದಿಗೆ ಸಂಯೋಜನೆಗೊಂಡಿದ್ದು ಎಲ್ಲ ಪ್ರಯಾಣಿಕರಿಗೂ ಪ್ರೀಮಿಯಂ ಮತ್ತು ಅನುಕೂಲಕರ ಅನುಭವ ನೀಡುತ್ತದೆ.
ಹೊಚ್ಚಹೊಸ ಇ.ಎಸ್.500ಇ ಹೊಸದಾಗಿ ಅಭಿವೃದ್ಧಿಯಾದ ಬ್ಯಾಟರಿ ಪ್ಯಾಕ್ ನಿಂದ ಸನ್ನದ್ಧವಾಗಿದ್ದು ಇದು ದೊಡ್ಡ ಸಾಮರ್ಥ್ಯದ ಲಿಥಿಯಂ-ಅಯಾನ್ ಬ್ಯಾಟರಿ ಸೆಲ್ಸ್ ಬಳಸಿ ಅಭಿವೃದ್ಧಿಪಡಿಸಲಾಗಿದೆ.
74.68ಕೆ.ಡಬ್ಲ್ಯೂ.ಎಚ್. ಬ್ಯಾಟರಿ ಸಾಮರ್ಥ್ಯದೊಂದಿಗೆ ಈ ಪ್ಯಾಕ್ 252 ಕೆ.ಡಬ್ಲ್ಯೂ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಒಂದು ಚಾರ್ಜ್ ನಲ್ಲಿ 580* ಕಿ.ಮೀ. ಚಾಲನೆಯ ಶ್ರೇಣಿ ಪೂರೈಸುತ್ತದೆ.
ಈ ಆಲ್-ನ್ಯೂ ಇ.ಎಸ್.500ಇ ಐದು ಪ್ರೀಮಿಯಂ ಹೊರಾಂಗಣ ಬಣ್ಣದ ಆಯ್ಕೆಗಳು ಮತ್ತು ಎರಡು ಒಳಾಂಗಣ ಬಣ್ಣಗಳಲ್ಲಿ ಲಭ್ಯವಿದೆ



