ಮಲ್ಲಪುರಂ (ಕೇರಳ): ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ಗನ್ ಮ್ಯಾನ್ ಮತ್ತು ಚಾಲಕನ ಮೇಲೆ ಸ್ಥಳೀಯ ಗುಂಪೊಂದು ಹಲ್ಲೆ ಮಾಡಿದ ಘಟನೆ ಕೇರಳದ ವಂಡೂರಿನಲ್ಲಿ ನಡೆದಿದೆ.
ವಂಡೂರ್ ಪೊಲೀಸರು, ತರೂರ್ ಗನ್ಮ್ಯಾನ್ ರತೀಶ್ ಕೆಪಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ವಶಕ್ಕೆ ಪಡೆದಿದ್ದಾರೆ.
ಪ್ರಚಾರ ಕಾರ್ಯಕ್ರಮಕ್ಕಾಗಿ ಶಶಿ ತರೂರ್ ಶುಕ್ರವಾರ ಸಂಜೆ 7.30ರ ಸುಮಾರಿಗೆ ತೆರಳುತ್ತಿದ್ದ ವೇಳೆ ವಂಡೂರಿನ ತಿರುವಲ್ಲಿ ಬಳಿಯ ಚೆಲಿಥೋಡ್ನಲ್ಲಿ ಈ ಘಟನೆ ವರದಿಯಾಗಿದೆ
ಕಾಂಗ್ರೆಸ್ ನಾಯಕ ಎ ಪಿ ಅನಿಲ್ಕುಮಾರ್ ಪರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕಾಗಿ ಶಶಿ ತರೂರ್ ತೆರಳುತ್ತಿದ್ದಾಗ ಅವರ ವಾಹನವನ್ನು ಚೆಲಿಥೋಡ್ ಸೇತುವೆಯಲ್ಲಿ ಐವರ ಗುಂಪೊಂದು ಅಡ್ಡಗಟ್ಟಿದ್ದು, ಈ ಸಂದರ್ಭದಲ್ಲಿ ಕೆಳಗಿಳಿದ ಗನ್ಮ್ಯಾನ್ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸದರ ವಾಹನವನ್ನು ಎರಡು ವಾಹದಲ್ಲಿ ತೆರಳುತ್ತಿದ್ದ ಆರೋಪಿಗಳು ನಡುರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಈ ರಸ್ತೆ ಮಾರ್ಗವೂ ಕಿರಿದಾಗಿದ್ದು, ಸಂಸದರ ಮತ್ತು ಅವರ ಬೆಂಗಾವಲು ವಾಹನ ಇರುವ ಹಿನ್ನೆಲೆ ಸ್ವಲ್ಪ ವೇಗವಾಗಿ ಸುಗಮವಾಗಿ ಸಂಚಾರ ಮಾಡುವಂತೆ ಗನ್ಮ್ಯಾನ್ ಕೇಳಿದ್ದಾರೆ. ರಸ್ತೆಯನ್ನು ಸಂಚಾರ ಮುಕ್ತ ಮಾಡಲು ಗನ್ಮ್ಯಾನ್ ಪ್ರಯತ್ನ ನಡೆಸಿದ್ದು, ಸಹಾಯಕ್ಕೆ ಆಗಮಿಸಿದ ಚಾಲಕ ಸೇರಿ ಇಬ್ಬರ ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಕುರಿತು ವಿಚಾರಿಸಿ ಕಾಳಜಿ ತೋರಿದ ಎಲ್ಲಾ ಸ್ನೇಹಿತರು ಮತ್ತು ಹಿತೈಷಿಗಳಿಗೆ ಧನ್ಯವಾದಗಳು. ನಾವು ಈ ಮೊದಲೇ ಯೋಜಿಸಿದಂತೆ ಘಟನೆ ಬಳಿಕ ಧೈರ್ಯದಿಂದ ಮುಂದುವರೆದು ಇನ್ನೂ ಎರಡು ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಿದ್ದೇವೆ. ದಾಳಿ ಘಟನೆಯು ತಮ್ಮ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದ್ದಾರೆ.



