Thursday, May 14, 2026
Google search engine
Homeದೇಶಕೇರಳದಲ್ಲಿ ಶಶಿತರೂರ್‌ ಗನ್‌ ಮ್ಯಾನ್‌, ಚಾಲಕನ ಮೆಲೆ ದಾಳಿ: ಒಬ್ಬ ವಶಕ್ಕೆ

ಕೇರಳದಲ್ಲಿ ಶಶಿತರೂರ್‌ ಗನ್‌ ಮ್ಯಾನ್‌, ಚಾಲಕನ ಮೆಲೆ ದಾಳಿ: ಒಬ್ಬ ವಶಕ್ಕೆ

ಮಲ್ಲಪುರಂ (ಕೇರಳ): ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್‌ ಗನ್‌ ಮ್ಯಾನ್‌ ಮತ್ತು ಚಾಲಕನ ಮೇಲೆ ಸ್ಥಳೀಯ ಗುಂಪೊಂದು ಹಲ್ಲೆ ಮಾಡಿದ ಘಟನೆ ಕೇರಳದ ವಂಡೂರಿನಲ್ಲಿ ನಡೆದಿದೆ.

ವಂಡೂರ್​ ಪೊಲೀಸರು, ತರೂರ್​ ಗನ್​ಮ್ಯಾನ್​ ರತೀಶ್​ ಕೆಪಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ವಶಕ್ಕೆ ಪಡೆದಿದ್ದಾರೆ.
ಪ್ರಚಾರ ಕಾರ್ಯಕ್ರಮಕ್ಕಾಗಿ ಶಶಿ ತರೂರ್​ ಶುಕ್ರವಾರ ಸಂಜೆ 7.30ರ ಸುಮಾರಿಗೆ ತೆರಳುತ್ತಿದ್ದ ವೇಳೆ ವಂಡೂರಿನ ತಿರುವಲ್ಲಿ ಬಳಿಯ ಚೆಲಿಥೋಡ್​ನಲ್ಲಿ ಈ ಘಟನೆ ವರದಿಯಾಗಿದೆ

ಕಾಂಗ್ರೆಸ್ ನಾಯಕ ಎ ಪಿ ಅನಿಲ್‌ಕುಮಾರ್ ಪರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕಾಗಿ ಶಶಿ ತರೂರ್ ತೆರಳುತ್ತಿದ್ದಾಗ ಅವರ ವಾಹನವನ್ನು ಚೆಲಿಥೋಡ್ ಸೇತುವೆಯಲ್ಲಿ ಐವರ ಗುಂಪೊಂದು ಅಡ್ಡಗಟ್ಟಿದ್ದು, ಈ ಸಂದರ್ಭದಲ್ಲಿ ಕೆಳಗಿಳಿದ ಗನ್​ಮ್ಯಾನ್​ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಸದರ ವಾಹನವನ್ನು ಎರಡು ವಾಹದಲ್ಲಿ ತೆರಳುತ್ತಿದ್ದ ಆರೋಪಿಗಳು ನಡುರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಈ ರಸ್ತೆ ಮಾರ್ಗವೂ ಕಿರಿದಾಗಿದ್ದು, ಸಂಸದರ ಮತ್ತು ಅವರ ಬೆಂಗಾವಲು ವಾಹನ ಇರುವ ಹಿನ್ನೆಲೆ ಸ್ವಲ್ಪ ವೇಗವಾಗಿ ಸುಗಮವಾಗಿ ಸಂಚಾರ ಮಾಡುವಂತೆ ಗನ್​ಮ್ಯಾನ್​ ಕೇಳಿದ್ದಾರೆ. ರಸ್ತೆಯನ್ನು ಸಂಚಾರ ಮುಕ್ತ ಮಾಡಲು ಗನ್​ಮ್ಯಾನ್​ ಪ್ರಯತ್ನ ನಡೆಸಿದ್ದು, ಸಹಾಯಕ್ಕೆ ಆಗಮಿಸಿದ ಚಾಲಕ ಸೇರಿ ಇಬ್ಬರ ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಕುರಿತು ವಿಚಾರಿಸಿ ಕಾಳಜಿ ತೋರಿದ ಎಲ್ಲಾ ಸ್ನೇಹಿತರು ಮತ್ತು ಹಿತೈಷಿಗಳಿಗೆ ಧನ್ಯವಾದಗಳು. ನಾವು ಈ ಮೊದಲೇ ಯೋಜಿಸಿದಂತೆ ಘಟನೆ ಬಳಿಕ ಧೈರ್ಯದಿಂದ ಮುಂದುವರೆದು ಇನ್ನೂ ಎರಡು ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಿದ್ದೇವೆ. ದಾಳಿ ಘಟನೆಯು ತಮ್ಮ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments