ಗಂಡನ ಜೊತೆ ವೀಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾಗಲೇ ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ.
ಗಂಡನ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದ ಶ್ರೀಲಂಕಾ ಮೂಲದ ನಟಿ ಸುಭಾಷಿಣಿ (36) ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2024ರಲ್ಲಿ ಬಿಪಿನ್ ಚಂದ್ರನ್ ಅವರನ್ನು ವಿವಾಹವಾಗಿದ್ದ ನಟಿ ಸುಭಾಷಿಣಿ, ಬೆಂಗಳೂರಿನಲ್ಲಿ ವಾಸವಾಗಿದ್ದು, ಚಿತ್ರೀಕರಣ ಇದ್ದಾಗ ಬಾಡಿಗೆ ಪಡೆದಿರುವ ಚೆನ್ನೈನ ಅಯ್ಯಪ್ಪಂತಂಖ ಖಾಸಗಿ ವಸತಿ ಸಂಕೀರ್ಣದಲ್ಲಿ ನೆಲೆಸುತ್ತಿದ್ದರು.
ಖಾಸಗಿ ಟಿವಿ ಚಾನೆಲ್‌ನಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಕಾರ್ಯಕ್ರಮದಲ್ಲಿ ಪೋಷಕ ನಟಿಯಾಗಿ ಅಭಿನಯಿಸುತ್ತಿದ್ದು,
ಈ ತಿಂಗಳ 3ರಂದು ಧಾರಾವಾಹಿ ಚಿತ್ರೀಕರಣಕ್ಕಾಗಿ ಚೆನ್ನೈಗೆ ಆಗಮಿಸಿದ್ದ ಸುಭಾಷಿಣಿ, ಅಯ್ಯಪ್ಪಂತಂಗಲ್ ನಿವಾಸದಲ್ಲಿ ತಂಗಿದ್ದಾಗ ಭಾನುವಾರ ಮಧ್ಯರಾತ್ರಿ ಸುಮಾರಿಗೆ ಪತಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ.
ಮಾತುಕತೆ ವೇಳೆ ದಂಪತಿಗಳ ನಡುವೆ ಕೌಟುಂಬಿಕ ವಿಷಯದಲ್ಲಿ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಸುಭಾಷಿಣಿ ವಿಡಿಯೋ ಕರೆಯಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೀವ್ರ ಆಘಾತಕ್ಕೆ ಒಳಗೊಳಗಾದ ಪತಿ ಕೂಡಲೇ ವಸತಿ ಸಂಕೀರ್ಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿ ಪೋರೂರ್ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಸುಭಾಷಿಣಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಪೊಲೀಸರು ಸುಭಾಷಿಣಿ ಅವರ ಮೃತದೇಹವನ್ನು ಹೊರತೆಗೆದು ಪೂನಮಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಕಳುಹಿಸಲಾಗಿದೆ.
ಕೌಟುಂಬಿಕ ಸಾವಿನ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಅಥವಾ ಬೇರೆ ಯಾವುದೇ ಕಾರಣಗಳಿವೆ ಎಂದು ಪೊಲೀಸರು ತನಿಖೆ ನಡೆಸಿದ್ದಾರೆ ಆರಂಭಿಸಿದ್ದಾರೆ. ಪತಿ ಬಿಪಿನ್ ಚಂದ್ರನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.



