Thursday, June 25, 2026
Google search engine
Homeದೇಶಪೆಟ್ರೋಲ್‌, ಡೀಸೆಲ್‌ ನಂತರ ಸಿಎನ್‌ ಜಿ ದರ 2 ರೂ. ಏರಿಕೆ!

ಪೆಟ್ರೋಲ್‌, ಡೀಸೆಲ್‌ ನಂತರ ಸಿಎನ್‌ ಜಿ ದರ 2 ರೂ. ಏರಿಕೆ!

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಬೆನ್ನಲ್ಲೇ ಇದೀಗ ಸಿಎನ್‌ ಜಿ ದರ ಕೆಜಿಗೆ 2 ರೂ. ಏರಿಕೆ ಮಾಡಲಾಗಿದೆ. ಕಳೆದ 2 ವಾರಗಳಲ್ಲಿ ನಾಲ್ಕನೇ ಬಾರಿ ಹೆಚ್ಚಳವಾಗಿದೆ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಪ್ರಕಾರ, ಸಿಎನ್‌ಜಿಗೆ ಈಗ ಪ್ರತಿ ಕೆ.ಜಿಗೆ 83.09 ರೂ. ಇದೆ. ಮೇ 15ರ ನಂತರ ಒಟ್ಟಾರೆ ಪ್ರತಿ ಕೆಜಿಗೆ 4 ರೂ. ಬೆಲೆ ಏರಿಕೆಯಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ದೇಶದಲ್ಲಿ ಇಂಧನ ಬೆಲೆಗಳು ಮತ್ತೆ ಏರುಗತಿಯಲ್ಲಿ ಸಾಗುತ್ತಿವೆ. ನಿನ್ನೆ (ಸೋಮವಾರ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ 2.61 ರೂ ಮತ್ತು 2.71 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈ ಮೂಲಕ 11 ದಿನಗಳಲ್ಲಿ ಇಂಧನ ಬೆಲೆಗಳು ಲೀಟರ್‌ಗೆ 7.5 ರೂಪಾಯಿಯಷ್ಟು ತುಟ್ಟಿಯಾಗಿವೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 110.69 ರೂ, ಡೀಸೆಲ್‌ಗೆ 98.69 ರೂ, ದೆಹಲಿಯಲ್ಲಿ ಪೆಟ್ರೋಲ್‌ಗೆ 102.12 ರೂ. ಡೀಸೆಲ್‌ಗೆ 95.20 ರೂ.ಗಳಷ್ಟಾಗಿತ್ತು. ಇನ್ನುಳಿದಂತೆ, ಮುಂಬೈನಲ್ಲಿ ಪೆಟ್ರೋಲ್‌ಗೆ 111.21 ರೂ. ಮತ್ತು ಡೀಸೆಲ್‌ಗೆ 97.83 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್‌ಗೆ 113.51 ರೂ, ಡೀಸೆಲ್‌ಗೆ 99.82 ರೂ ಹಾಗೂ ಚೆನ್ನೈನಲ್ಲಿ ಪೆಟ್ರೋಲ್‌ಗೆ 107.77 ರೂ. ಮತ್ತು ಡೀಸೆಲ್‌ಗೆ 99.55 ರೂ. ಇದೆ ಎಂದು ಉದ್ಯಮ ಮೂಲಗಳು ತಿಳಿಸಿದ್ದವು. ಸ್ಥಳೀಯ ತೆರಿಗೆಗಳಿಂದಾಗಿ ವಿವಿಧ ರಾಜ್ಯಗಳಲ್ಲಿ ಈ ಬೆಲೆಗಳು ಬದಲಾಗುತ್ತವೆ.

ಸರ್ಕಾರಿ ಸ್ವಾಮ್ಯದ ತೈಲ ಪೂರೈಕೆ ಕಂಪನಿಗಳು ತಮ್ಮ ನಷ್ಟ ಸರಿದೂಗಿಸಲು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಾದ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಹೆಚ್‌ಪಿಸಿಎಲ್) ಮುಂತಾದ ಸರ್ಕಾರಿ ಸ್ವಾಮ್ಯದ ಕಂಪನಿಗಳು ದೇಶದಲ್ಲಿ ಇಂಧನ ಮಾರುಕಟ್ಟೆಯ ಶೇ.90ರಷ್ಟು ನಿಯಂತ್ರಣ ಹೊಂದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments