ಅನುಭವಿಗಳಾದ ಕೆಎಲ್ ರಾಹುಲ್ ಹಾಗೂ ಶುಭಮನ್ ಗಿಲ್ ಅವರ ಶತಕ ಸೇರಿ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಭರ್ಜರಿ ಪ್ರದರ್ಶನದಿಂದ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಮೊದಲ ದಿನವೇ ಹಿಡಿತ ಸಾಧಿಸಿದೆ.
ಚಂಡೀಗಢದಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 368 ರನ್ ಪೇರಿಸಿದೆ.
ಚಂಡೀಗಢದಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 368 ರನ್ ಪೇರಿಸಿತು.
ಆರಂಭಿಕ ಯಶಸ್ವಿ ಜೈಸ್ವಾಲ್ (24) ಹೊಡಿಬಡಿ ಆಟಕ್ಕೆ ಮುಂದಾಗಿ ಕೈ ಚೆಲ್ಲಿದರು. ಆದರೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ಎರಡನೇ ವಿಕೆಟ್ ಗೆ 139 ರನ್ ಜೊತೆಯಾಟದಿಂದ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸಿದರು.
ಕೆಎಲ್ ರಾಹುಲ್ 165 ಎಸೆತಗಳಲ್ಲಿ 11 ಬೌಂಡರಿ ಒಳಗೊಂಡ ಬರೋಬ್ಬರಿ ಶತಕ ಸಿಡಿಸಿದರು. ಸಾಯಿ ಸುದರ್ಶನ್ 104 ಎಸೆತಗಳಲ್ಲಿ 13 ಬೌಂಡರಿ ಸಹಾಯದಿಂದ 81 ರನ್ ಗಳಿಸಿದರು.
ಇವರಿಬ್ಬರ ಜೊತೆಯಾಟ ಮುರಿದ ನಂತರ ಜೊತೆಯಾದ ನಾಯಕ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ನಾಲ್ಕನೇ ವಿಕೆಟ್ ಗೆ 121 ರನ್ ಜೊತೆಯಾಟ ನಿಭಾಯಿಸಿ ಅಜೇಯರಾಗಿ ಉಳಿದಿದ್ದಾರೆ.
ಐಪಿಎಲ್ ಭರ್ಜರಿ ಮುಂದುವರಿಸಿದ ಗಿಲ್ 143 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 103 ರನ್ ಬಾರಿಸಿ ಔಟಾಗದೇ ಉಳಿದಿದ್ದಾರೆ. ರಿಷಭ್ ಪಂತ್ 70 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರು.
ಮೊಹಮದ್ ಸಲೀಂ ಎರಡು ವಿಕೆಟ್ ಪಡೆದಿದ್ದು ಬಿಟ್ಟರೆ ಆಫ್ಘಾನಿಸ್ತಾನ ಬೌಲರ್ ಗಳು ನಿರಾಸೆ ಮೂಡಿಸಿದರು. ಜಿಯುರ್ ರೆಹಮಾನ್, ರಾಹುಲ್ ಅವರ ಏಕೈಕ ವಿಕೆಟ್ ಪಡೆದಿದ್ದಕ್ಕೆ ಸಮಾಧಾನ ಪಟ್ಟುಕೊಂಡರು.



