ಖ್ಯಾತ ಕುಂಕುಮ್ ಭಾಗ್ಯ ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದ ಕಿರುತೆರೆ ನಟಿ ಸಂಚಿತಾ ಉಗಾಲೆ 22ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜೂನ್ 14ರಂದು ಮಹಾರಾಷ್ಟ್ರದ ನಲಸೋಪರಾದ ಆಚೋಲೆ ಗ್ರಾಮದ ಸಾಯಿ ಸಂತೋಷಿ ಕಟ್ಟಡದಲ್ಲಿರುವ ತಮ್ಮ ನಿವಾಸದಲ್ಲಿ ಸಂಚಿತಾ ಉಗಾಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾ ಥಮಿಕ ವರದಿಗಳ ಪ್ರಕಾರ ನಟಿ ಸಂಜೆ 7:00 ರಿಂದ 7:30ರ ನಡುವೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ತಿಳಿದ ಕುಟುಂಬ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ನಟಿಯನ್ನು ವಸೈ-ವಿರಾರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ನಟಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.
ಚಿತಾ ಅವರ ತಂದೆ ಮಚ್ಚಿಂದ್ರ ಉಗಾಲೆ ಸಲ್ಲಿಸಿದ ದೂರಿನ ಆಧಾರದ ಮೇಲೆ, ಆಚೋಲೆ ಪೊಲೀಸರು ಇಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಅಸಹಜ ಸಾವು ವರದಿ (ADR) ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಮತ್ತು ಎಲ್ಲಾ ಆಯಾಮಗಳಿಂದಲೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಚಿತಾ ಉಗಾಲೆ ತಮ್ಮ ಕಿರಿವಯಸ್ಸಿನಲ್ಲೇ ಮನರಂಜನಾ ಉದ್ಯಮದಲ್ಲಿ ಗುರುತಿಸಿಕೊಂಡಿದ್ದು, ಉನ್ನತ ಮಟ್ಟಕ್ಕೇರುವ ಹಾದಿಯಲ್ಲಿದ್ದರು. ಝೀ ಟಿವಿಯಲ್ಲಿ ದೀರ್ಘವಾದಿ ಪ್ರಸಾರ ಕಂಡಿದ್ದ ಕುಂಕುಮ್ ಭಾಗ್ಯದಲ್ಲಿ ದಿಯಾ ಟಂಡನ್ ಪಾತ್ರದಲ್ಲಿ ನಟಿಸುವ ಮೂಲಕ ಮನ್ನಣೆ ಗಳಿಸಿದರು.
ಕುಂಕುಮ್ ಭಾಗ್ಯದ ಹೊರತಾಗಿ, ಸಂಚಿತಾ ವಾಗ್ಲೆ ಕಿ ದುನಿಯಾದಲ್ಲಿಯೂ ಕಾಣಿಸಿಕೊಂಡರು. ಇಲ್ಲಿ ರುಚಿತಾ ಜೇಟ್ಲಿ ಪಾತ್ರವನ್ನು ನಿರ್ವಹಿಸಿದ್ದರು. ನಂತರ ಅವರು ದಂಗಲ್ ಟಿವಿಯ ದಿಲ್ವಾಲಿ ದುಲ್ಹಾ ಲೇ ಜಾಯೇಗಿಯಲ್ಲಿ ಸೊರಬ್ ಬೇಡಿ ಜೊತೆ ಸುಕೂನ್ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು.
ಕಿರುತೆರೆ ಧಾರವಾಹಿ ಅಲ್ಲದೇ ಕೆಲ ಸಿನಿಮಾ ಮತ್ತು ಒಟಿಟಿ ಪ್ರಾಜೆಕ್ಟ್ಗಳಲ್ಲಿಯೂ ಸಂಚಿತಾ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ ಹಿಸ್ಟಾರಿಕಲ್ ಡ್ರಾಮಾ ‘ಛಾವಾ’ದಲ್ಲಿ ತಾರಾ ರಾಣಿಯ ಕಿರಿಯ ಆವೃತ್ತಿಯನ್ನು ಚಿತ್ರಿಸಿದ್ದಾರೆ. ಮನೋಜ್ ಬಾಜಪೇಯಿ ನಟಿಸಿದ ‘ಸೈಲೆನ್ಸ್ 2: ದಿ ನೈಟ್ ಔಲ್ ಬಾರ್’ ಶೂಟೌಟ್ನಲ್ಲಿ ಕಾಣಿಸಿಕೊಂಡಿದ್ದಾರೆ.



