Wednesday, June 24, 2026
Google search engine
Homeಕ್ರೀಡೆ27 ಕೋಟಿಗೆ ಬದಲು 15 ಕೋಟಿಗೆ ಡೆಲ್ಲಿ ಪಾಲಾದ ರಿಷಭ್ ಪಂತ್!

27 ಕೋಟಿಗೆ ಬದಲು 15 ಕೋಟಿಗೆ ಡೆಲ್ಲಿ ಪಾಲಾದ ರಿಷಭ್ ಪಂತ್!

ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ದಾಖಲೆಯ 27 ಕೋಟಿ ರೂ.ಗೆ ಮಾರಾಟವಾಗಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ಅರ್ಧದಷ್ಟು ಶುಲ್ಕ ಕಡಿತ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಗೆ ಮರಳಿದ್ದಾರೆ.

ಟ್ರೇಡ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದು, ಇದಕ್ಕೆ ಪ್ರತಿಯಾಗಿ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬಂದಿದ್ದಾರೆ.

ಲಕ್ನೋ ಸೈಪರ್‌ಜೈಂಟ್ಸ್ ತಂಡವನ್ನು ಪಂತ್ 2 ಆವೃತ್ತಿಗಳಲ್ಲಿ ಮುನ್ನಡೆಸಿದ್ದರು. ಆದರೆ ಇವರ ನಾಯಕತ್ವದಲ್ಲಿ ತಂಡ ಒಮ್ಮೆಯೂ ಪ್ಲೇಆಫ್ ಹಂತ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಂತ್ ನಾಯಕತ್ವದಿಂದ ಕೆಳಗಿಳಿದಿದ್ದರು.

ಇದೀಗ ಲಕ್ನೋ ಹಾಗೂ ಡೆಲ್ಲಿ ಫ್ರಾಂಚೈಸಿಗಳು ನಡೆಸಿದ ಉನ್ನತಮಟ್ಟದ ಸಭೆಯಲ್ಲಿ ಟ್ರೇಡ್ ಅನ್ನು ಅಂತಿಮಗೊಳಿಸಿವೆ. ರಿಷಬ್ ಪಂತ್ ಬರೋಬ್ಬರಿ ₹12 ಕೋಟಿ ವೇತನ ಕಡಿತದೊಂದಿಗೆ ಡೆಲ್ಲಿ ಫ್ರಾಂಚೈಸಿ ಸೇರಿಕೊಂಡಿದ್ದಾರೆ.

2025ರ ಐಪಿಎಲ್ ಆರಂಭಕ್ಕೂ ಮೊದಲು ರಿಷಬ್ ಪಂತ್‌ ಅವರನ್ನು ಲಖನೌ ಫ್ರಾಂಚೈಸಿಯು ₹27 ಕೋಟಿಗೆ ಖರೀದಿಸಿತ್ತು. ಇದೀಗ, ಅವರು ₹15 ಕೋಟಿಗೆ ಡೆಲ್ಲಿ ತಂಡದ ಪಾಲಾಗಿದ್ದಾರೆ. ರಿಷಬ್ ಪಂತ್ ಬದಲಿಗೆ ಲಖನೌ ತಂಡ ಸೇರುತ್ತಿರುವ ಕುಲದೀಪ್ ಯಾದವ್ ತಮ್ಮ ಹಾಲಿ ಶುಲ್ಕ ₹13.50 ಕೋಟಿಗೆ ಎಲ್‌ಎಸ್‌ಜಿ ಪಾಲಾಗಿದ್ದಾರೆ.

ರಿಷಬ್ ಪಂತ್‌ ಅವರನ್ನು ಖರೀದಿಸಿದ ಸಂದರ್ಭದಲ್ಲಿ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಧೀರ್ಘಾವದಿಗಾಗಿ ಪಂತ್ ಅವರನ್ನು ಖರೀದಿಸಲಾಗಿದೆ ಎಂದು ಹೇಳಿದ್ದರು. ಆದರೆ, ಎರಡು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿರುವ ಪಂತ್, ನಿರೀಕ್ಷಿತ ಪ್ರದರ್ಶನ ತೋರದ ಹಿನ್ನೆಲೆ ಅವರನ್ನು ಕುಲದೀಪ್ ಯಾದವ್ ಜೊತೆ ಟ್ರೇಡ್ ಮೂಲಕ ಬಿಡುಗಡೆ ಮಾಡಿದ್ದಾರೆ.

ರಿಷಬ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ 2016ರಿಂದ 2024ರವರೆಗೆ 111 ಪಂದ್ಯಗಳನ್ನು ಆಡಿದ್ದರು. ಮಾತ್ರವಲ್ಲ, 2021 ಮತ್ತು 2024ರ ನಡುವೆ ಡೆಲ್ಲಿ ತಂಡದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದೀಗ ಮತ್ತೆ ಅವರು ತಮ್ಮ ಹಳೆ ಫ್ರಾಂಚೈಸಿ ಸೇರಿಕೊಂಡಿದ್ದಾರೆ.

ಐಪಿಎಲ್ 2025ರಲ್ಲಿ ಲಖನೌ ತಂಡವು 6 ಗೆಲುವುಗಳು ಮತ್ತು 8 ಸೋಲುಗಳೊಂದಿಗೆ ಅಭಿಯಾನ 7ನೇ ಸ್ಥಾನದಲ್ಲಿ ಮುಗಿಸಿದರೆ, 2026ರಲ್ಲಿ 4 ಗೆಲುವು ಮತ್ತು 10 ಸೋಲುಗಳಿಂದ ಕೇವಲ 8 ಅಂಕಗಳೊಂದಿಗೆ ಕೊನೆಯಲ್ಲಿ ಮುಕ್ತಾಯಗೊಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments