Sunday, August 2, 2026
Google search engine
Homeಕ್ರೀಡೆಕಾಮನ್ ವೆಲ್ತ್ ನಲ್ಲಿ ಭಾರತ ಚಿನ್ನದ ಬೇಟೆ: 6ನೇ ಸ್ಥಾನಕ್ಕೆ ಜಿಗಿತ!

ಕಾಮನ್ ವೆಲ್ತ್ ನಲ್ಲಿ ಭಾರತ ಚಿನ್ನದ ಬೇಟೆ: 6ನೇ ಸ್ಥಾನಕ್ಕೆ ಜಿಗಿತ!

ಗ್ಲಾಸ್ಕೊ: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವಾರಾಂತ್ಯದಲ್ಲಿ ಭಾರತೀಯ ಕ್ರೀಡಾಪಟುಗಳು ಭರ್ಜರಿಯಾಗಿ ಪದಕಗಳ ಬೇಟೆ ಮುಂದುವರಿಸಿದ್ದು, ಭಾರತ 8 ಚಿನ್ನ, 15 ಬೆಳ್ಳಿ ಹಾಗೂ 8 ಕಂಚು ಸೇರಿದಂತೆ 32 ಪದಕ ಗೆದ್ದು 6ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಭಾರತದ ಬಾಕ್ಸರ್‌ಗಳಾದ ಜಾಸ್ಮಿನ್ ಲಂಬೋರಿಯಾ ಮತ್ತು ಪ್ರೀತಿ ಪವಾರ್ ಶನಿವಾರ ನಡೆದ ಮಹಿಳೆಯರ 57 ಕೆ.ಜಿ. ಮತ್ತು 54 ಕೆ.ಜಿ. ವಿಭಾಗದದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಪ್ರೀತಿ ಪವಾರ್ ಮಹಿಳೆಯರ 54 ಕೆ.ಜಿ. ವಿಭಾಗದ ಫೈನಲ್ ನಲ್ಲಿ ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೋ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ಸಾಧಿಸಿ ಸ್ವರ್ಣ ಪದಕ ಕೊರಳಿಗೇರಿಸಿಕೊಂಡರೆ ಹಾಲಿ ವಿಶ್ವ ಚಾಂಪಿಯನ್ ಜಾಸ್ಮಿನ್ ಲಂಬೋರಿಯಾ ಉತ್ತರ ಐರ್ಲೆಂಡ್‌ನ ಮೈಕೆಲಾ ವಾಲ್ಸ್ ವಿರುದ್ಧ 5-0 ಅಂಕದಿಂದ ಅಧಿಕಾರಯುತ ಗೆಲುವು ದಾಖಲಿಸಿ ಮತ್ತೊಂದು ಚಿನ್ನದ ಪದಕ ತಂದುಕೊಟ್ಟರು.

ಜುಡೊದಲ್ಲಿ 2 ಚಿನ್ನ

ಶುಕ್ರವಾರ ತಡರಾತ್ರಿ ನಡೆದ ಜುಡೊ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಮತ್ತೆರಡು ಪದಕ ಗೆದ್ದುಕೊಂಡರು.

ಅಸ್ಮಿತಾ ದೇವಿ ಮತ್ತು ಹರ್ಷ್ ಸಿಂಗ್ ಕ್ರಮವಾಗಿ ಮಹಿಳೆಯರ 48 ಕೆ.ಜಿ ಹಾಗೂ ಪುರುಷರ 68 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿ ಎರಡೂ ವಿಭಾಗಗಳಲ್ಲಿ ಸ್ವರ್ಣ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟುಗಳು ಎಂಬ ದಾಖಲೆ ನಿರ್ಮಿಸಿದರು.

ತ್ರಿಪುರದ 23 ವರ್ಷದ ಅಸ್ಮಿತಾ ಫೈನಲ್ ನಲ್ಲಿ ಕೆನಡಾದ ಹೀದಿ ಕ್ವಾಚ್ ವಿರುದ್ಧ ಗೋಲ್ಡನ್ ಸ್ಕೋರ್ ಮೂಲಕ ಗೆದ್ದರು.

ಪುರುಷರ ಫೈನಲ್‌ನಲ್ಲಿ 23 ವರ್ಷದ ಹರ್ಷ್ ಸಿಂಗ್ ಅವರು ಆಸ್ಟ್ರೇಲಿಯಾದ ಒಲಿಂಪಿಯನ್ ಜೊಶುವಾ ಕಾಟ್ಸ್ ಅವರನ್ನು ಮಣಿಸಿದರು.

ಇದೇ ಮೊದಲ ಬಾರಿ ಕಾಮನ್‌ವೆಲ್ತ್ ಕೂಟಕ್ಕೆ ಅರ್ಹತೆ ಗಳಿಸಿದ್ದ ಹರ್ಷ್ ಸಿಂಗ್, ಆಸ್ಟ್ರೇಲಿಯಾದ ಜೊಡೊಕಾ ಅವರನ್ನು ಸೋಲಿಸಿ ಅಚ್ಚರಿಯೊಂದಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.

ಶುಕ್ರವಾರ ನಡೆದ ಅತ್ಯಂತ ಕುಹೂಹಲ ಮೂಡಿಸಿದ್ದ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲಲು ವಿಫಲರಾದರು. ಆದರೆ ಟಾಪ್ 3ಯಲ್ಲಿ ನೀರಜ್ ಚೋಪ್ರಾ ಹಾಗೂ ಯಶ್ವಿರ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು. ಶ್ರೀಲಂಕಾದ ರುಮೇಶ್ ಪತಿರಾಜೆ 89.75 ಮೀ. ದೂರ ಎಸೆದು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments