Saturday, November 23, 2024
Google search engine
Homeತಾಜಾ ಸುದ್ದಿಮಾಲ್ಡಿವ್ಸ್ ನಿಂದ ಭಾರತದ ಸೇನೆ ವಾಪಸ್ ಪ್ರಕ್ರಿಯೆ ಆರಂಭ!

ಮಾಲ್ಡಿವ್ಸ್ ನಿಂದ ಭಾರತದ ಸೇನೆ ವಾಪಸ್ ಪ್ರಕ್ರಿಯೆ ಆರಂಭ!

ಮಾಲ್ಡಿವ್ಸ್ ನೀಡಿದ ಗಡುವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಆ ದೇಶದಿಂದ ಸೇನೆಯನ್ನು ವಾಪಸ್ ಕರೆತರುವ ಪ್ರಕ್ರಿಯೆ ಆರಂಭಗೊಂಡಿದೆ.

ಚೀನಾ ಕಡೆ ವಾಲಿರುವ ಮಾಲ್ಡಿವ್ಸ್ ಅಧ್ಯಕ್ಷ ಮೊಹಮದ್ ಮಿಯಾಜು ಮೇ 10ರೊಳಗೆ ಭಾರತ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಗಡುವು ನೀಡಿದ್ದರು. ಈ ಗಡುವು ಪೂರ್ಣಗೊಳ್ಳಲು ಸುಮಾರು 2 ತಿಂಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸೇನೆ ವಾಪಸ್ ಕರೆಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ಭಾರತದಲ್ಲಿ ಸುಮಾರು ಒಂದು ತಿಂಗಳ ಕಾಲ ಲೋಕಸಭಾ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬರಲು ಮೇ 22ವರೆಗೂ ಸಮಯವಿದೆ. ಈ  ಹಿನ್ನೆಲೆಯಲ್ಲಿ ರಾಜತಾಂತ್ರಿಕ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಮುಂಚಿತವಾಗಿಯೇ ಸೇನೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತದ ಸುಮಾರು 25 ಸೇನಾ ಸಿಬ್ಬಂದಿ ಮಾಲ್ಡಿವ್ಸ್ ನಲ್ಲಿ ಕರ್ತವ್ಯದಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments