Friday, November 22, 2024
Google search engine
Homeಅಪರಾಧತಂದೆಯಲ್ಲ ಎಂದ ಗಂಡ, ನವಜಾತ ಅವಳಿ ಮಕ್ಕಳ ಕತ್ತು ಸೀಳಿ ಕೊಂದ ತಾಯಿ!

ತಂದೆಯಲ್ಲ ಎಂದ ಗಂಡ, ನವಜಾತ ಅವಳಿ ಮಕ್ಕಳ ಕತ್ತು ಸೀಳಿ ಕೊಂದ ತಾಯಿ!

ಹುಟ್ಟಿದ ಮಕ್ಕಳಿಗೆ ನಾನು ಅಪ್ಪನಲ್ಲ. ಯಾರಿಗೆ ಹುಟ್ಟಿದವೋ ಎಂದು ಗಂಡ ಅಪಮಾನ ಸಹಿಸದ ಮಹಿಳೆಯೊಬ್ಬಳು ನವಜಾತ ಅವಳಿ ಮಕ್ಕಳ ಕತ್ತು ಸೀಳಿ ಕೊಂದ ಹೃದಯ ವಿದ್ರಾವಕ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

ಪೂಂಚ್ ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಗಂಡ ಮೂರು ತಿಂಗಳ ಕಾಲ ಸೌದಿ ಅರೆಬಿಯಾಗೆ ಕೆಲಸದ ಮೇಲೆ ತೆರಳಿದ್ದು, ಆತ ತವರಿಗೆ ಮರಳಿದ ಕೆಲವೇ ದಿನಗಳಲ್ಲಿ ಪತ್ನಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು.

ಅವಳಿ ಮಕ್ಕಳು ಜನಿಸುತ್ತಿದ್ದಂತೆ ಗಂಡ ಪೊಲೀಸ್ ಠಾಣೆಗೆ ತೆರಳಿ ಪತ್ನಿಗೆ ಜನಿಸಿದ ಮಕ್ಕಳು ನನ್ನದಲ್ಲ. ಅಕ್ರಮ ಸಂಬಂಧದಿಂದ ಹುಟ್ಟಿದ್ದು ಎಂದು ದೂರು ನೀಡಿದ.

ಗಂಡನ ವರ್ತನೆಯಿಂದ ಕೆರಳಿದ ಪತ್ನಿ ಎರಡು ಮಕ್ಕಳನ್ನು ನಿರ್ಜನ ಮೈದಾನಕ್ಕೆ ಕರೆದೊಯ್ದು ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಆರಂಭದಲ್ಲಿ ಸ್ಥಳೀಯರು ಪತಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಅವಳಿ ಹೆಣ್ಣು ಮಕ್ಕಳನ್ನು ತಾನೇ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳವಂತೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments