ರಾಮ ರಾಮ ಎಂದು ನುಡಿದಿತಲೇ, ನರ ಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ, ಮುತ್ತೈದೆ ಭೂತಾಯಿ ಉಡಿ ತುಂಬಿತಲೇ ಎಂದು ದಾವಣಗೆರೆಯ ಆನೆಕೊಂಡ ಬಸವೇಶ್ವರ ದೇವರ ಕಾರ್ಣಿಕ ನುಡಿದಿದೆ.
ಮಂಗಳವಾರ ಆನೆಕೊಂಡ ಬಸವೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಈ ವೇಳೆಯಲ್ಲಿ ದೇವರ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ.
ರಾಮ ರಾಮ ಎಂದು ನುಡಿದಿತಲೇ, ನರ ಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ, ಮುತ್ತೈದೆ ಭೂತಾಯಿ ಉಡಿ ತುಂಬಿತಲೇ ಎಂದು ಕಾರ್ಣಿಕ ಭವಿಷ್ಯ ನುಡಿದಿದ್ದು, ಇದು ಮುಂದಿನ ದಿನಗಳ ಶುಭ ಸೂಚಕವಾಗಿದೆ. ಕೃಷಿಯಲ್ಲಿ ಉತ್ತಮ ಫಸಲು ಬರಲಿದೆ ಎಂದು ಪೂಜಾರಪ್ಪ ಕಾರ್ಣಿಕ ನುಡಿ ವಿವರಿಸಿದರು.