Thursday, May 14, 2026
Google search engine
Homeಜಿಲ್ಲಾ ಸುದ್ದಿಕಂದಕಕ್ಕೆ ಕಾರು ಉರುಳಿ ತಂದೆ ಮಗ ಸೇರಿ ಮೂವರು ದುರ್ಮರಣ

ಕಂದಕಕ್ಕೆ ಕಾರು ಉರುಳಿ ತಂದೆ ಮಗ ಸೇರಿ ಮೂವರು ದುರ್ಮರಣ

ಕಂದಕಕ್ಕೆ ಕಾರು ಉರುಳಿ ಬಿದ್ದು ತಂದೆ-ಮಗ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಂಭವಿಸಿದೆ.

ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ಸಂಭವಿಸಿದ ಅಪಘಾತದಲ್ಲಿ ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ತಂದೆ ಮಗ ಅಣ್ಣು ನಾಯ್ಕ್, ರಮೇಶ್ ನಾಯ್ಕ್ ಮತ್ತು ಚಿದಾನಂದ, ಮೃತಪಟ್ಟಿದ್ದಾರೆ.

ಕಾರು ಸುಳ್ಯದಿಂದ ಪುತ್ತೂರಿನ ಪುಣಚಕ್ಕೆ ಆಗಮಿಸುತ್ತಿತ್ತು. ನಸುಕಿನ ಜಾವ 4:15ರ ಸುಮಾರಿಗೆ ನಿದ್ದೆ ಮಂಪರಿನಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments