Thursday, May 14, 2026
Google search engine
Homeತಾಜಾ ಸುದ್ದಿ6 ದಿನದಿಂದ ಕೊಳವೆ ಬಾವಿಯಲ್ಲಿ ಸಿಲುಕಿರುವ 3 ವರ್ಷದ ಬಾಲಕಿ: ರಕ್ಷಣೆಗಾಗಿ ತಾಯಿ ಪ್ರಾರ್ಥನೆ

6 ದಿನದಿಂದ ಕೊಳವೆ ಬಾವಿಯಲ್ಲಿ ಸಿಲುಕಿರುವ 3 ವರ್ಷದ ಬಾಲಕಿ: ರಕ್ಷಣೆಗಾಗಿ ತಾಯಿ ಪ್ರಾರ್ಥನೆ

6 ದಿನಗಳ ಕಳೆದರೂ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿರುವ 3 ವರ್ಷದ ಬಾಲಕಿ ರಕ್ಷಣೆಗೆ ಪ್ರಯತ್ನಗಳು ಮುಂದುವರಿಯುತ್ತಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಕಟ್ ಪುತಲಿ ಎಂಬಲ್ಲಿ ಸೋಮವಾರ ೩ ವರ್ಷದ ಬಾಲಕಿ ಚೇತನಾ 700 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು, ಆಕೆಯ ರಕ್ಷಣೆಗೆ ಜಿಲ್ಲಾಡಳಿತ ಹರಸಾಹಸಪಡುತ್ತಿದೆ. ಕಳೆದೆರಡು ದಿನ ಸುರಿದ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.

6 ದಿನಗಳಿಂದ ಕೊಳವೆ ಬಾವಿಯಲ್ಲಿ ಸಿಲುಕಿರುವ ಮಗಳನ್ನು ಹೇಗಾದರೂ ರಕ್ಷಿಸಿ ಎಂದು ತಾಯಿ ಧೋಲಾ ದೇವಿ ಅಧಿಕಾರಿಗಳ ಮುಂದೆ ಗೋಗರೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಏನೂ ಉತ್ತರ ನೀಡಬೇಕು ಎಂದು ತಿಳಿಯದೇ ಗೊಂದಲದಲ್ಲಿದ್ದಾರೆ.

ಬಾಲಕಿ ಚೇತನಾ ೧೫೦ ಆಳದಲ್ಲಿ ಸಿಲುಕಿದ್ದಾಳೆ ಎಂದು ಶಂಕಿಸಲಾಗಿದೆ. 6 ದಿನ ಕಳೆದಿರುವುದರಿಂದ ಬಾಲಕಿ ನಿದ್ದೆ ಮಾಡುತ್ತಿದ್ದಾಳೆಯೇ ಅಥವಾ ಆರೋಗ್ಯವಾಗಿ ಇದ್ದಾಳೆಯೇ ಎಂಬ ಗೊಂದಲ ಮುಂದುವರಿದಿದೆ.

ಅಧಿಕಾರಿಗಳು 90 ಡಿಗ್ರಿ ಸುತ್ತಳತೆಯ ಪೈಪ್ ಗಳನ್ನು ಕತ್ತರಿಸಿ ವೆಲ್ಡಿಂಗ್ ಮಾಡಿ ಬಾಲಕಿ ಇರುವ ಜಾಗದತ್ತ ತೆರಳಲು ಪ್ರಯತ್ನಿಸುತ್ತಿದ್ದಾರೆ. ಶನಿವಾರ ಬೆಳಿಗ್ಗೆ ಈ ಕಾರ್ಯ ಆರಂಭವಾಗಿದ್ದು, ಚೇತನಾ ಪ್ರಾರ್ಥಿಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments