ಜಾರ್ಖಂಡ್ ನಿಂದ ದೆಹಲಿಗೆ ಹೊರಟ್ಟಿದ್ದ 7 ಜನರಿದ್ದ ಏರ್ ಆಂಬುಲೆನ್ಸ್ ಪತನಗೊಂಡ ದಾರುಣ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಜಾರ್ಖಂಡ್ ರಾಜಧಾನಿ ರಾಂಚಿಯಿಂದ ರಾತ್ರಿ 7.11ರ ಸುಮಾರಿಗೆ ಹೊರಟ್ಟಿದ್ದ ಹೆಲಿಕಾಪ್ಟರ್ ಚಾತ್ರಾ ಜಿಲೆಯ ಬಳಿಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.
ಸುಟ್ಟ ಗಾಯಗಳಿಂದ ನರಳುತ್ತಿದ್ದ 41 ವರ್ಷದ ಸಂಜಯ್ ಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯಿಂದ ದೆಹಲಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು.
ಹೆಲಿಕಾಪ್ಟರ್ ನಲ್ಲಿ ಒಬ್ಬ ರೋಗಿ, ಒಬ್ಬ ವೈದ್ಯ, ಒಬ್ಬ ಪೈಲೆಟ್, ಇಬ್ಬರು ಸಹಾಯಕರು ಸೇರಿದಂತೆ 7 ಮಂದಿ ಇದ್ದರು ಎಂದು ಹೇಳಲಾಗಿದೆ.



