Sunday, June 28, 2026
Google search engine
Homeದೇಶದುರಂತದ ಬೆನ್ನಲ್ಲೇ ಇಂದು ಏರ್ ಇಂಡಿಯಾ ಅಹಮದಾಬಾದ್- ಲಂಡನ್ ವಿಮಾನ ರದ್ದು

ದುರಂತದ ಬೆನ್ನಲ್ಲೇ ಇಂದು ಏರ್ ಇಂಡಿಯಾ ಅಹಮದಾಬಾದ್- ಲಂಡನ್ ವಿಮಾನ ರದ್ದು

ಅಹಮದಾಬಾದ್ ವಿಮಾನ ದುರಂತ ನಡೆದ ಕೆಲವೇ ದಿನಗಳಲ್ಲಿ ತಾಂತ್ರಿಕ ದೋಷದಿಂದ ಏರ್ ಇಂಡಿಯಾದ ಅಹಮದಾಬಾದ್- ಲಂಡನ್ ವಿಮಾನ ಸಂಚಾರವನ್ನು ದಿಢೀರನೆ ರದ್ದುಗೊಳಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕಂಡು ಬಂದ ದೋಷದ ಕಾರಣ ಅಹಮದಾಬಾದ್ ಮತ್ತು ಲಂಡನ್ ನಡುವೆ ಸಂಚರಿಸಬೇಕಿದ್ದ ಏರ್ ಇಂಡಿಯಾ ಎಐ159 ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ವಿಮಾನ ಸಂಚಾರ ರದ್ದು ಮಾಡಿದ್ದಕ್ಕೆ ಸ್ಪಷ್ಟ ಕಾರಣ ಬಹಿರಂಗಪಡಿಸಲಾಗಿಲ್ಲ.

ನಾನು ಲಂಡನ್ ಗೆ ಹೊರಟ್ಟಿದ್ದೆ. ಆದರೆ ವಿಮಾನ ಸಂಚಾರವನ್ನು ಕೊನೆಯ ಗಳಿಗೆಯಲ್ಲಿ ರದ್ದು ಮಾಡಲಾಗಿದೆ ಎಂದು ಪ್ರಯಾಣಿಕರೊಬ್ಬರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಮಂಗಳವಾರ ಮಧ್ಯಾಹ್ನ 1.10ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದುಗೊಳಿಸಲಾಗಿಲ್ಲ. ಬದಲಾಗಿ ಪುನರ್ ಸಮಯ ನಿಗದಿ ಮಾಡಲಾಗಿದ್ದು, 3 ಗಂಟೆಗೆ ಹೊರಡಲಿದೆ ಎಂದು ಹೇಳಲಾಗಿದೆ. ಆದರೆ ವಿಮಾನ ಸಂಸ್ಥೆ 1.45ಕ್ಕೆ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದೆ.

ಅಹಮದಾಬಾದ್ ನಲ್ಲಿ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಸೇರಿದಂತೆ 274 ಮಂದಿ ಮೃತಪಟ್ಟ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದೇ ಮಾರ್ಗದ ವಿಮಾನದಲ್ಲಿ ದೋಷ ಕಂಡು ಬಂದಿದ್ದು, ವಿಮಾನ ಸಂಚಾರ ರದ್ದುಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments