Sunday, June 28, 2026
Google search engine
Homeದೇಶಕೂದಲೆಳೆ ಅಂತರದಲ್ಲಿ ತಪ್ಪಿದ ಮತ್ತೊಂದು ದುರಂತ: ಹಾಂಕಾಂಗ್ ಮರಳಿದ ಏರ್ ಇಂಡಿಯಾ ಬೋಯಿಂದ ವಿಮಾನ!

ಕೂದಲೆಳೆ ಅಂತರದಲ್ಲಿ ತಪ್ಪಿದ ಮತ್ತೊಂದು ದುರಂತ: ಹಾಂಕಾಂಗ್ ಮರಳಿದ ಏರ್ ಇಂಡಿಯಾ ಬೋಯಿಂದ ವಿಮಾನ!

ದೆಹಲಿಯಿಂದ ಹೊರಟ ಏರ್ ಇಂಡಿಯಾ ಬೋಯಿಂಗ್ ವಿಮಾನ ಹಾರಾಟ ನಡೆಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮಾರ್ಗ ಮಧ್ಯದಲ್ಲೇ ಹಾಂಕಾಂಗ್ ಗೆ ಮರಳಿದ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಅಹಮದಾಬಾದ್ ನಲ್ಲಿ ಏರ್ ಇಂಡಿಯಾದ ಬೋಯಿಂಗ್ ವಿಮಾನ ದುರಂತ ಸಂಭವಿಸಿದ ನಂತರ ಈ ಘಟನೆ ನಡೆದಿದೆ.

ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸೌದಿಯಾ ಏರ್‌ಲೈನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿದೆ. ಸೋಮವಾರ ಒಂದೇ ದಿನ ಎರಡು ವಿಮಾನ ದುರಂತಗಳು ಕೂದಲೆಳೆ ಅಂತರದಿಂದ ತಪ್ಪಿದಂತಾಗಿದೆ.

ಹಾಂಕಾಂಗ್ ನಿಂದ ದೆಹಲಿಗೆ ಹೊರಟ್ಟಿದ್ದ ಬೋಯಿಂಗ್ 787-8 ಡ್ರೀಮ್ ಲೈನರ್ ಎಐ-315 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಪೈಲೆಟ್ ತಾಂತ್ರಿಕ ದೋಷದ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ವಿಮಾನ ಹಾಂಕಾಂಗ್ ಗೆ ಮರಳಿದ್ದು, ಯಶಸ್ವಿಯಾಗಿ ಲ್ಯಾಂಡ್ ಮಾಡುವ ಮೂಲಕ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ನೂರಾರು ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು, ಪ್ರಯಾಣಿಕರ ಸ್ಥಿತಿ ಬಗ್ಗೆ ಅಥವಾ ವಿಮಾನದಲ್ಲಿ ತಾಂತ್ರಿಕ ದೋಷದ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಲಾಗಿಲ್ಲ.

ಹಾಂಕಾಂಗ್ ನಿಂದ ವಿಮಾನ ಹೊರಟ 90 ನಿಮಿಷಗಳಲ್ಲಿ ಮರಳಿದೆ. ಸಮುದ್ರದಲ್ಲಿ ಹಲವು ಸುತ್ತು ಹೊಡೆದ ನಂತರ ಹಿಥ್ರೋ ವಿಮಾನ ನಿಲ್ದಾಣದಲ್ಲಿ ವಾಪಸ್ ಇಳಿಸಲಾಗಿದೆ.

ಭಾರತದಲ್ಲಿ ಏರ್ ಇಂಡಿಯಾ ಮತ್ತು ಇಂಡಿಗೊ ಸಂಸ್ಥೆಗಳು ಮಾತ್ರ ಡ್ರೀಮ್ ಲೈನರ್ ಬೋಯಿಂಗ್ ವಿಮಾನಗಳನ್ನು ಹೊಂದಿದ್ದು, ಏರ್ ಇಂಡಿಯಾ ಬಳಿ 33 ಬೋಯಿಂಗ್ ವಿಮಾನಗಳು ಇವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments