ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರ ತಂಡ ಆರೋಪಿಯ ವಿರುದ್ಧ ಎನ್ ಕೌಂಟರ್ ಕಾರ್ಯಾಚರಣೆ ಮಾಡಿದ್ದು, ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರಗಳ್ಳತನ, ದರೋಡೆ, ಕಳ್ಳತನ ಸೇರಿದಂತೆ ಹಲವು ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ 22 ವರ್ಷದ ಜಿತೇಂದ್ರ ಎಂಬಾತನನ್ನು ಮಹಿಳಾ ಪೊಲೀಸರ ತಂಡ ಯಶಸ್ವಿಯಾಗಿ ಸೆರೆ ಹಿಡಿದಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಉಪಾಸನಾ ಚೆಕ್ ಪೋಸ್ಟ್ ನಲ್ಲಿ ಆರೋಪಿಗೆ ನಿಲ್ಲುವಂತೆ ಸೂಚಿಸಿದರೂ ಆತ ಕೇಳದೇ ಹೋದಾಗ ಎನ್ ಕೌಂಟರ್ ಕಾರ್ಯಾಚರಣೆ ನಡೆಸಿದ್ದಾರೆ.
ಬೈಕ್ ನಲ್ಲಿ ಹೋಗುತ್ತಿದ್ದ ಆರೋಪಿ ಜಿತೇಂದ್ರ ಪೊಲೀಸರ ಎಚ್ಚರಿಕೆ ಕಡೆಗಣಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರು ಹಾರಿಸಿದ ಗುಂಡಿಗೆ ಕಾಲಿಗೆ ಪೆಟ್ಟು ಬಿದ್ದು ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾನೆ. ಗಾಯಗೊಂಡ ಆತನನ್ನು ಮಹಿಳಾ ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಚಾರಣೆ ಜಿತೇಂದ್ರ ಬೈಕ್ ಸೇರಿದಂತೆ ದ್ವಿಚಕ್ರ ವಾಹನಗಳನ್ನು ದೆಹಲಿ ಮುಂತಾದ ಕಡೆಗಳಲ್ಲಿ ಕದಿಯುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ವಾಹನ ಮಾತ್ರವಲ್ಲದೇ ಸರಗಳ್ಳತನ, ಫೋನ್, ಟ್ಯಾಬ್ ಮುಂತಾದ ಹಲವು ರೀತಿಯ ಕಳ್ಳತನಗಳಲ್ಲೂ ಭಾಗಿಯಾಗಿದ್ದಾನೆ ಬಾಯಿ ಬಿಟ್ಟಿದ್ದಾನೆ.



