ಅಮೆರಿಕದ ಅತ್ಯಾಧುನಿಕ 1800 ಕೋಟಿ ರೂ. ಮೌಲ್ಯದ ಎಂಕ್ಯೂ-4ಸಿ ಟ್ರಿಟಾನ್ (MQ-4C Triton) ಡ್ರೋಣ್ ಇರಾನ್ ನಲ್ಲಿ ನಾಪತ್ತೆಯಾಗಿದೆ.
ಇರಾನ್ ನಿಂದ ಹಡಗು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿರುವ ಹರ್ಮುಜ್ ಜಲಸಂಧಿಯ ಮೇಲೆ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕದ ಅತ್ಯಾಧುನಿಕ ಡ್ರೋಣ್ ನಾಪತ್ತೆಯಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆ ಆದ ಬೆನ್ನಲ್ಲೇ ಹರ್ಮುಜ್ ಮೇಲೆ ಅಮೆರಿಕ ರಹಸ್ಯ ಕಾರ್ಯಾಚರಣೆ ನಡೆಸುತ್ತಿತ್ತು. ಈ ವಿಮಾನ ಪತನಗೊಂಡಿತೇ ಅಥವಾ ಹೊಡೆದುರುಳಿಸಲಾಗಿದೆಯೇ ಎಂಬ ಬಗ್ಗೆ ಅನುಮಾನ ಇದ್ದು, ಈ ಡ್ರೋಣ್ 200 ಮಿಲಿಯನ್ ಡಾಲರ್ ಅಂದರೆ 856 ಕೋಟಿ ರೂ. ಮೌಲ್ಯದ್ದು ಎಂದು ಹೇಳಲಾಗಿದೆ.
೨೦೧೮ರಲ್ಲಿ ಅಮೆರಿಕದ ವಾಯುಪಡೆಗೆ ಸೇರ್ಪಡೆಗೊಂಡ ಎಂಕ್ಯೂ 4ಸಿ ಟ್ರಿಟಾನ್ ಡ್ರೋಣ್ ಇದಾಗಿದ್ದು, ಇರಾನ್ ನಲ್ಲಿ ಅಮೆರಿಕ ಕಳೆದುಕೊಂಡ ಅತ್ಯಾಧುನಿಕ ಡ್ರೋಣ್ ಆಗಿದೆ. ಇದಕ್ಕೂ ಮೊದಲು ಎಫ್ -೧೫ಇ, ಎ-೧೦, ಎಫ್-೩೫ ವಿಮಾನಗಳನ್ನು ಕಳೆದುಕೊಂಡಿದೆ.
ಎಂಕ್ಯೂ 4ಸಿ ಟ್ರಿಟಾನ್ ಡ್ರೋಣ್ 10 ಸಾವಿರ ಅಡಿಯಿಂದ 50 ಸಾವಿರ ಅಡಿಯವರೆಗಿನ ಎತ್ತರದಿಂದ ದತ್ತಾಂಶ ಕಲೆಹಾಕುವ ಸಾಮರ್ಥ್ಯ ಹೊಂದಿದೆ. ಹರ್ಮುಜ್ ಜಲಸಂಧಿಯ ಮೇಲೆ 3 ಗಂಟೆಗಳ ಕಾಲ ಹಾರಾಟ ನಡೆಸಿದ ನಂತರ ಡ್ರೋಣ್ ನಾಪತ್ತೆಯಾಗಿದೆ.



