ಯಾತ್ರಿಗಳು ಸಾಗುತ್ತಿದ್ದ ದೋಣಿ ಯಮುನಾ ನದಿಯಲ್ಲಿ ಮುಳುಗಿದ ಪರಿಣಾಮ ಕನಿಷ್ಠ 10 ಮಂದಿ ಯಾತ್ರಿಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮದುರೈನಲ್ಲಿ ಸಂಭವಿಸಿದೆ.
ಕಾಶಿಘಾಟ್ ನ ಬೃಂದಾವನದ ಸೇತುವೆ ಬಳಿ ಸುಮಾರು 30 ಪ್ರಯಾಣಿಕರಿದ್ದ ದೋಣಿ ಸಾಗುತ್ತಿದ್ದಾಗ ನೂಕುನುಗ್ಗಲು ಸಂಭವಸಿದ್ದರಿಂದ ದೋಣಿ ಮಗುಚಿಕೊಂಡಿದೆ.
ದೋಣಿ ಮಗುಚಿದ ಸುದ್ದಿ ಕೇಳುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದು, ಕನಿಷ್ಠ ೧೪ ಮಂದಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಂತೂನ್ ಸೇತುವೆ ಬಳಿ ದೋಣಿ ಸಾಗುತ್ತಿದ್ದಾಗ ಶನಿವಾರ ಮಧ್ಯಾಹ್ನ 3.15ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ೧೦ ಶವಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



