ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನೇ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿ ಕೊಲೆ ಮಾಡಿ ಸಿಕ್ಕಿಬಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಗಣೇಶಪುರದ ಅಪಾರ್ಟ್ ಮೆಂಟ್ ನಿವಾಸಿಗಳಾದ ಜ್ಯೋತಿ ಬಾಂದೇಕರ್, ಸುಹಾನಿ ಬಾಂದೇಕರ್ ಹಾಗೂ ಕೊಲೆಗೆ ಸಾಥ್ ಕೊಟ್ಟ ಆರೋಪಿಯ ಅಪ್ರಾಪ್ತ ಪುತ್ರನನ್ನು ಬಂಧಿಸಲಾಗಿದೆ.
ಏಪ್ರಿಲ್ 22 ರಂದು ಅಂಜನಾ ದಡ್ಡೀಕರ್ ಕೊಲೆ ಮಾಡಿದ್ದ ಆರೋಪಿಗಳು ಸಿಕ್ಕಿ ಬೀಳಬಾರದು ಎಂದು ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಕದ್ದು ಕಳ್ಳರ ಕೃತ್ಯ ಎಂದು ಬಿಂಬಿಸಿದ್ದರು.
ಕೊಲೆಯಾದ ಅಂಜನಾ 15 ಸಾವಿರ ರೂ. ಸಾಲ ವಾಪಸ್ ಕೇಳಿದ್ದಕ್ಕೆ ಆರೋಪಿಗಳು ಗಲಾಟೆ ಮಾಡಿ, ಹಲ್ಲೆ ಮಾಡಿದ್ದರು. ಈ ವೇಳೆ ತಲೆಗೆ ಪೆಟ್ಟಾಗಿ, ಅಂಜನಾ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಅನುಮಾನ ಬರದಂತೆ, ಮಕ್ಕಳನ್ನು ಬಚಾವ್ ಮಾಡಲು ಮಹಿಳೆಯ ಚಿನ್ನಾಭರಣ ಕದ್ದಿದ್ದಳು. ಇಷ್ಟೇ ಅಲ್ಲದೇ ಘಟನೆ ನಡೆದ ದಿನ ಊರಲ್ಲಿ ಇರಲಿಲ್ಲ ಎಂಬಂತೆ ಬಿಂಬಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಗಣೇಶಪುರದ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.



