Tuesday, July 28, 2026
Google search engine
HomeಅಪರಾಧBengaluru: ಪ್ರೇಯಸಿಯನ್ನು ಕೊಂದು 2 ದಿನ ಶವದ ಜೊತೆ ಕಳೆದ ಪ್ರಿಯಕರ!

Bengaluru: ಪ್ರೇಯಸಿಯನ್ನು ಕೊಂದು 2 ದಿನ ಶವದ ಜೊತೆ ಕಳೆದ ಪ್ರಿಯಕರ!

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳ ಮೂಲಕ ಜನಪ್ರಿಯಳಾಗಿದ್ದ ಪ್ರೇಯಸಿಯನ್ನು ಕೊಲೆಗೈದ ಪ್ರಿಯಕರ ಶವದ ಜೊತೆ 2 ದಿನ ಕಳೆದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಇಂದಿರಾ ನಗರ ಅಪಾರ್ಟ್ ಮೆಂಟ್ ನಲ್ಲಿ ಅಸ್ಸಾಂ ಮೂಲದ ಮಾಯಾ ಗೊಗಾಯ್ ಕೊಲೆಯಾಗಿದ್ದಾಳೆ. ಕೇರಳ ಮೂಲದ ಗೆಳೆಯ ಅರವ್ ಹರ್ನಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ನವೆಂಬರ್ 24ರಂದು ಮಾಯಾಗಳನ್ನು ಹಲವಾರು ಬಾರಿ ಚಾಕುವಿನಿಂದ ಎದೆಗೆ ಇರಿದು ಕೊಲೆ ಮಾಡಿದ್ದ ಅರವ್ ಸಿಕ್ಕಿ ಬೀಳಬಾರದು ಎಂದು ಎರಡು ದಿನಗಳ ಕಾಲ ಅಪಾರ್ಟ್ ಮೆಂಟ್ ನಲ್ಲೇ ಇದ್ದು ನಂತರ ತಲೆ ಮರೆಸಿಕೊಂಡಿದ್ದಾನೆ.

ಪೊಲೀಸರು ಅಪಾರ್ಟ್ ಮೆಂಟ್ ನಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದು ಎರಡು ದಿನಗಳ ಹಿಂದೆ ಇಬ್ಬರೂ ಅಪಾರ್ಟ್ ಮೆಂಟ್ ಕೊಠಢಿಗೆ ಹೋಗಿದ್ದು ಮಾತ್ರ ಇದ್ದು, ಹೊರಗೆ ಒಬ್ಬನೇ ಬಂದಿದ್ದಾನೆ.

ಪೊಲೀಸರು ಮಹಿಳೆ ಕೆಲಸ ಮಾಡುತ್ತಿದ್ದ ಎಚ್ ಎಸ್ ಆರ್ ಲೇಔಟ್ ಬಳಿ ಪರಿಶೀಲಿಸಿದ್ದು, ಆರೋಪಿ ಕೇರಳಕ್ಕೆ ಪರಾರಿಯಾಗಿರುವ ಶಂಕೆ ಇದ್ದು, ತಪಾಸಣೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments