Saturday, May 16, 2026
Google search engine
Homeಅಪರಾಧಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಗರ್ಭ ನಿರೋಧಕ ಮಾತ್ರೆ ಬೇಕಾ ಅಂದ ವಿದ್ಯಾರ್ಥಿ!

ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಗರ್ಭ ನಿರೋಧಕ ಮಾತ್ರೆ ಬೇಕಾ ಅಂದ ವಿದ್ಯಾರ್ಥಿ!

ಓದಿನಲ್ಲಿ ಹಿಂದೆ ಬಿದ್ದಿದ್ದ ವಿದ್ಯಾರ್ಥಿನಿಯನ್ನು ಕಾಲೇಜಿನ ಶೌಚಾಲಯಕ್ಕೆ ಎಳೆದೊಯ್ದು ಕಿರಿಯ ವಿದ್ಯಾರ್ಥಿ ಅತ್ಯಾಚಾರ ಎಸಗಿದ ಭೀಬತ್ಸ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿಕ ಕಿರಿಯ ವಿದ್ಯಾರ್ಥಿ 21 ವರ್ಷದ ಜೀವನ್ ಗೌಡ ಅತ್ಯಾಚಾರ ಎಸಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ಟೋಬರ್ 10 ರಂದು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಗೆ ಜೀವನ್ ಗೌಡ ಪದೇಪದೆ ಕರೆ ಮಾಡಿ ಕೆಲವು ಸಾಮಾಗ್ರಿ ನೀಡಬೇಕು ಭೇಟಿಯಾಗು ಎಂದು ಒತ್ತಾಯಿಸಿದ. ಭೋಜನ ವಿರಾಮದ ವೇಳೆ 7ನೇ ಮಹಡಿಯ ಬ್ಲಾಕ್ ಬಳಿ ಬರುವಂತೆ ಹೇಳಿದ.

7ನೇ ಮಹಡಿಗೆ ಹೋದಾಗ ನನಗೆ ಮುತ್ತು ನೀಡಲು ಬಂದಿದ್ದು, ನಾನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದೆ. ನನ್ನನ್ನು ಹಿಂಬಾಲಿಸಿಕೊಂಡು ಬಂದ ಜೀವನ್ ಗೌಡ, 6ನೇ ಮಹಡಿಯಲ್ಲಿ ನನ್ನನ್ನು ಪುರುಷರ ಶೌಚಾಲಯದ ಒಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆ ನಡೆದ 5 ದಿನಗಳ ನಂತರ ಅಂದರೆ 15ರಂದು ಹನುಮಂತ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅತ್ಯಾಚಾರದ ವೇಳೆ ನನಗೆ ಮೊಬೈಲ್ ಕರೆ ಬಂದರೂ ಸ್ವೀಕರಿಸಲು ಬಿಡಲಿಲ್ಲ. ಆರೋಪಿ ಅತ್ಯಾಚಾರ ಎಸಗಿದ ನಂತರ ಗರ್ಭ ನಿರೋಧಕ ಮಾತ್ರೆ ಬೇಕಾ ಎಂದು ಕೇಳಿದ್ದಾನೆ ಎಂದು ವಿವರಿಸಿದ್ದಾರೆ.

ಘಟನೆ ಬಗ್ಗೆ ಹೇಳಿದರೆ ಪೋಷಕರು ಆಘಾತಗೊಳ್ಳುತ್ತಾರೆ ಎಂದು ಮತ್ತು ಮುಜುಗುರುವಾಗಿ ಯಾರಿಗೂ ಹೇಳಿರಲಿಲ್ಲ. ಆದರೆ ಈ ಬಗ್ಗೆ ಆಪ್ತ ಸ್ನೇಹಿತರ ಬಳಿ ಹೇಳಿಕೊಂಡಾಗ ಅವರು ಧೈರ್ಯ ತುಂಬಿದ್ದರಿಂದ ಪೋಷಕರಿಗೆ ತಿಳಿಸಿ, ಹನುಮಂತನಗರ ಠಾಣೆಗೆ ತೆರಳಿ ದೂರು ನೀಡಿದ್ದಾಗಿ ದೂರಿನಲ್ಲಿ ವಿದ್ಯಾರ್ಥಿನಿ ಉಲ್ಲೇಖಿಸಿದ್ದಾರೆ.

ಬಿಎನ್ಎಸ್ ಸೆಕ್ಷನ್ 64 ರಡಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ. ಕಾಲೇಜ್‌ನ ಕ್ಯಾಂಪಸ್‌ನೊಳಗಿರುವ ಸಿಸಿಟಿವಿ ಹಾಗೂ ದೈಹಿಕ ಹಿಂಸೆಯ‌ ಬಗೆಗಿನ ಸಾಕ್ಷ್ಯಗಳನ್ನ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments